ಮೈಸೂರು, ಫೆ.05, 2021 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ತಜ್ಞರ ಸಮಿತಿ ಭೇಟಿ ನೀಡಿ ಇಂದು ಪರಿಶೀಲನೆ ನಡೆಸಿತು.
12 ಬಿ ಮಾನ್ಯತೆ ಕೋರಿ ಕೆ.ಎಸ್.ಒಯು ಸಲ್ಲಿಸಿದ್ದ ಮನವಿ ಮೇರೆಗೆ ಕೇಂದ್ರ ಅನುದಾನ ಸಮಿತಿ (UGC) ವಿವಿಗೆ ಆಗಮಿಸಿದೆ. KSOU ಕುಲಪತಿ ಪ್ರೊ.ವಿದ್ಯಾಶಂಕರ್ ನೇತೃತ್ವದಲ್ಲಿ ತಜ್ಞರ ಸಮಿತಿಗೆ ಅಗತ್ಯ ದಾಖಲೆಗಳನ್ನು ಒದಗಿಸುವ ಕಾರ್ಯ ನಡೆದಿದ್ದು, ಇದಕ್ಕಾಗಿ ಮುಕ್ತ ವಿವಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಕಳೆದ ಕೆಲದಿನಗಳಿಂದ ಅಗತ್ಯ ಪೂರ್ವ ತಯಾರಿ ನಡೆಸಿತ್ತು.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಕ್ಯಾಂಪಸ್ ನಲ್ಲಿ ಮೂಲ ಸವಲತ್ತು ಹಾಗೂ ದಾಖಲೆಗಳನ್ನು ಪರಿಶೀಲಿಸಲಿರುವ ಸಮಿತಿ ಬಳಿಕ ಯುಜಿಸಿಗೆ ವರದಿ ನೀಡಲಿದೆ. ಈ ಸಮಿತಿ ನೀಡುವ ವರದಿ ಆಧಾರಿಸಿ ಯುಜಿಸಿ, 12 ಬಿ ಮಾನ್ಯತೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಅರ್ಹತೆಗೆ ಮಾನದಂಡ :
ಕರ್ನಾಟಕ ರಾಜ್ಯ ಮುಕ್ತ ವಿವಿಗೆ 12 ಬಿ ಮಾನ್ಯತೆಯನ್ನು ಯುಜಿಸಿ ನೀಡುವ ಮುನ್ನ ಕೆಲ ಮಾನದಂಡಗಳನ್ನು ಪೂರೈಸಿರಬೇಕಾಗುತ್ತದೆ. ಈ ಪೈಕಿ ಪ್ರಮುಖವಾದದ್ದು ಅಗತ್ಯ ಮೂಲ ಸೌಕರ್ಯ, ಕಟ್ಟಡಗಳನ್ನು ಹೊಂದಿರುವುದು. ಜತೆಗೆ ಮಾನ್ಯತೆ ಪಡೆದ ವಿಷಯಗಳ 6 ವಿಭಾಗಗಳ ಪೈಕಿ, ಒಂದು ವಿಭಾಗದಲ್ಲಿ ಒರ್ವ ಪ್ರಾಧ್ಯಾಪಕರು, ಇಬ್ಬರು ಸಹ ಪ್ರಾಧ್ಯಾಪಕರು ಹಾಗೂ ಮೂವರು ಸಹಾಯಕ ಪ್ರಾಧ್ಯಾಪಕರುಗಳನ್ನು ಒಳಗೊಂಡಿರಬೇಕು.
ಪ್ರಯೋಜನ ಏನು :
ಮುಕ್ತ ವಿವಿಗೆ 12 ಬಿ ಮಾನ್ಯತೆ ಲಭಿಸಿದಲ್ಲಿ, ಯುಜಿಸಿ ವತಿಯಿಂದ ವಿವಿ ಅಭಿವೃದ್ಧಿಗೆ ನೀಡುವ ಆರ್ಥಿಕ ಅನುದಾನಗಳನ್ನು ಪಡೆಯಲು ಅರ್ಹತೆ ಹೊಂದಿದಂತಾಗುತ್ತದೆ.
ನಿಬ್ಬಂಧನೆ:
12 ಬಿ ಮಾನ್ಯತೆ ಬಳಿಕ, ಯುಜಿಸಿ ನೆರವು ಪಡೆಯುವ ವೇಳೆ, ಒಟ್ಟು ಮೊತ್ತಕ್ಕೆ ಪೂರಕವಾಗಿ ಶೇ 20 ರಷ್ಟು ಹಣವನ್ನು ರಾಜ್ಯ ಸರಕಾರ ಅಥವಾ ವಿವಿ ನೀಡಬೇಕಾಗುತ್ತದೆ. ಮೂಲ ಸೌಕರ್ಯಗಳನ್ನು ನಿರ್ಮಿಸುವ ವೇಳೆ ಕೇಂದ್ರ ಸರಕಾರದ ಸಿಪಿಡಬ್ಲು ಉಸ್ತುವಾರಿಯಲ್ಲಿ ನಿಯಮಾವಳಿಗಳ ಪ್ರಕಾರವೇ ಕಾಮಗಾರಿ ನಡೆಸಬೇಕು.
oooooo
key words : karnataka-open-university-KSOU-12B-recognition-UGC-committee-visits-vc