ಬೆಂಗಳೂರು, 09 ಫೆಬ್ರವರಿ 2021 (www.justknnda.in): ನಟ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಮದುವೆ ಶಾಸ್ತ್ರಗಳು ಶುರುವಾಗಿವೆ.
ಹೌದು. ಫೆ.14ರಂದು ಹಸೆಮಣೆ ಏರುತ್ತಿರುವ ಕೃಷ್ಣ-ಮಿಲನಾ ಮದುವೆ ಶಾಸ್ತ್ರಗಳು ಆರಂಭವಾಗಿವೆ.
ರೀಲ್ ಲೈಫ್ ನಿಂದ ರಿಯಲ್ ಲೈಫ್ ನಲ್ಲೂ ಜೋಡಿಯಾಗಲು ಹೊರಟಿರುವ ನಟ-ನಟಿ ಮದುವೆಯಲ್ಲಿ ಸ್ಯಾಂಡಲ್ ವುಡ್ ಗಣ್ಯರು ಭಾಗವಹಿಸಲಿದ್ದಾರೆ.
ಮಿಲನಾ ಮನೆಯಲ್ಲಿ ನಿನ್ನೆಯಿಂದಲೇ ಶಾಸ್ತ್ರಗಳು ಆರಂಭವಾಗಿದೆ. ತಮ್ಮ ಮನೆಯ ಸಾಂಪ್ರದಾಯಿಕ ಶಾಸ್ತ್ರವೊಂದರ ವಿಡಿಯೋ ಪ್ರಕಟಿಸಿರುವ ಮಿಲನಾ ಮದುವೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.