ಮೈಸೂರು,ಫೆಬ್ರವರಿ,10,2021(www.justkannada.in) : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಂತನ ಚಿತ್ತಾರ ಪ್ರಕಾಶನದ ವತಿಯಿಂದ ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನಕುಮಾರ್ ಅವರ “ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು” ಹಾಗೂ “ಮೈಸೂರು ದಿ ಟೂರಿಸ್ಟ್ಯ್ ಪ್ಯಾರಡೈಸ್”(ಅನುವಾದಕರು-ಡಾ.ಆರ್.ನಾಗಭೂಷಣ) ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಫೆಬ್ರವರಿ 13ರಂದು ಆಯೋಜಿಸಲಾಗಿದೆ.ಕಲಾಮಂದಿರದಲ್ಲಿ ಅಂದು ಸಂಜೆ 4ಗಂಟೆಗೆ ಕೃತಿಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಡುಗಡೆಗೊಳಿಸಲಿದ್ದು, ಮುಖ್ಯ ಅಥಿತಿಗಳಾಗಿ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಎಲ್.ನಾಗೇಂದ್ರ ಆಗಮಿಸಲಿದ್ದಾರೆ.
ಕೃತಿ ಕುರಿತು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ನಂದೀಶ್ ಹಂಚೆ ಮಾತನಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಸಂಜೆ 4ರಿಂದ ಅಮ್ಮರಾಮಚಂದ್ರ, ಮರಿಸ್ವಾಮಿ ಮತ್ತು ತಂಡದವರಿಗೆ ಗೀತಗಾಯನ ಆಯೋಜಿಸಲಾಗಿದೆ.
key words : February 13-journalist-Anshi Prasanna Kumar-books-Release