ಮೈಸೂರು,ಫೆಬ್ರವರಿ,12,2021(www.justkannada.in): ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯಾಗುವ ವಿಶ್ವಾಸವಿದೆ. ಈ ಬಾರಿ ನಮ್ಮ ಅವಧಿಯಲ್ಲಿ ಮೊದಲ ಬಿಜೆಪಿ ಮೇಯರ್ ಮಾಡುವ ವಿಶ್ವಾಸವಿದೆ ಎಂದು ಬಿಜೆಪಿ ಶಾಸಕ ಎಲ್. ನಾಗೇಂದ್ರ ತಿಳಿಸಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಮೈತ್ರಿ ವಿಚಾರದಲ್ಲಿ ನಾವು ಹಿಂದೆ ಬಿದ್ದಿಲ್ಲ. ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯಾಗೋ ವಿಶ್ವಾಸವಿದೆ. ನಮ್ಮ ಪಕ್ಷದ ಮುಖಂಡರು ಮತ್ತು ಜಿಲ್ಲಾ ಉಸ್ತುವಾರಿಗಳು ಜೊತೆ ಚರ್ಚೆ ಮಾಡ್ತೇವೆ. ಈ ವಿಚಾರವಾಗಿ ಸದ್ಯ ಯಾವುದೇ ಮಾತುಕತೆ ಆಗಿಲ್ಲ ಎಂದರು.
ಬಿಜೆಪಿಯಿಂದ ಈ ಬಾರಿ ಮೊದಲ ಮೇಯರ್ ಮಾಡೋ ಅವಕಾಶ ಇದೆ. ಈ ವಿಚಾರವಾಗಿ ನಾಳೆ ಸಿಎಂ ಜೊತೆ ಯಾವುದೇ ಮಾತುಕತೆ ಇಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಜಿಲ್ಲಾ ಮಂತ್ರಿಗಳಿಗೆ ನಿರ್ದೇಶನ ನೀಡಲಿದ್ದಾರೆ. ಅದರಂತೆ ಮುಂದಿನ ನಿರ್ಧಾರಗಳನ್ನ ಜಿಲ್ಲಾ ಮಂತ್ರಿಗಳು ಮಾಡಲಿದ್ದಾರೆ ಎಂದು ತಿಳಿಸಿದರು.
Key words: Alliance – Mysore city corporation-MLA -L. Nagendra