ಬಡವರಿಗೆ ಅನ್ಯಾಯ ಮಾಡಲು ಕಾಂಗ್ರೆಸ್ ಬಿಡಲ್ಲ- ಆಹಾರ ಸಚಿವ ಉಮೇಶ್ ಕತ್ತಿ ನಿರ್ಧಾರಕ್ಕೆ ಯು.ಟಿ ಖಾದರ್ ಆಕ್ರೋಶ…

ಮಂಗಳೂರು,ಫೆಬ್ರವರಿ,15,2021(www.justkannada.in): ಟಿ.ವಿ, ಫ್ರಿಡ್ಜ್, ಬೈಕ್ ಇದ್ದವರಿಗೆ ರೇಷನ್ ಕಾರ್ಡ್ ರದ್ಧು ಮಾಡುವುದಾಗಿ ಹೇಳಿಕೆ ನೀಡಿರುವ ಆಹಾರ ಸಚಿವ ಉಮೇಶ್ ಕತ್ತಿ ವಿರುದ್ಧ ಮಾಜಿ ಸಚಿವ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.jk

ಟಿ.ವಿ, ಫ್ರಿಡ್ಜ್, ಬೈಕ್ ಇದ್ದವರಿಗೆ ರೇಷನ್ ಕಾರ್ಡ್ ರದ್ಧು ಮಾಡುವುದಾಗಿ ಹೇಳಿರುವುದು ಸರಿಯಲ್ಲ. ಕೂಡಲೇ ಸಚಿವರು ತಮ್ಮ ಹೇಳಿಕೆಯನ್ನ ಹಿಂಪಡೆಯಬೇಕು. ಬಡವರಿಗೆ ಅನ್ಯಾಯವಾಗಲು ಕಾಂಗ್ರೆಸ್ ಬಿಡಲ್ಲ ಎಂದು ಶಾಸಕ ಯುಟಿ ಖಾದರ್ ಹೇಳಿದರು.Congress -not - injustice –poor-UT Khadar- outrage - food minister –Umesh katti

ಸಚಿವ ಉಮೇಶ್ ಕತ್ತಿ ಹೇಳಿಕೆ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯು.ಟಿ ಖಾದರ್,  ಸಚಿವರ ಹೇಳಿಕೆ ಜನಸಾಮಾನ್ಯರ ವಿರುದ್ದವಾದದ್ದು.  ಸರಿಯಾಗಿ ರೇಷನ್ ಕಾರ್ಡ್ ಅನ್ನ ಜನರಿಗೆ ಹಂಚಲಾಗಿಲ್ಲ. ಮೊದಲು ರೇಷನ್ ಕಾರ್ಡು ಇಲ್ಲದ ಬಡವರಿಗೆ ಕಾರ್ಡ್ ನೀಡುವ ಕೆಲಸವನ್ನ ಮಾಡಲಿ ಎಂದು ಸಲಹೆ ನೀಡಿದರು.

ಬಡವರ ಯೋಜನೆ ಮಾತ್ರ ಇವರಿಗೆ ಕಾಣುವುದು. ಟಿವಿ, ಬೈಕ್ ಫ್ರಿಡ್ಜ್ ಬಿಟ್ಟುಬಿಡಿ.  ಶ್ರೀಮಂತರ ಬಳಿ ಇರುವ ಬಿಪಿಎಲ್ ಕಾರ್ಡ್ ರದ್ಧು ಮಾಡಿ ಎಂದು ಯುಟಿ ಖಾದರ್ ತಿಳಿಸಿದರು.

Key words: Congress -not – injustice –poor-UT Khadar- outrage – food minister –Umesh katti