ಬೆಂಗಳೂರು,ಫೆಬ್ರವರಿ,16,2021(www.justkannada.in): ಕೊರೋನಾ ಎರಡನೇ ಅಲೆ ಸಾದ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗಗಳಲ್ಲಿ 6 ಮತ್ತು 7ನೇ ತರಗತಿಯನ್ನ ಆರಂಭವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲ ಇಂದು ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಫೆಬ್ರವರಿ 22ರಿಂದ ರಾಜ್ಯದಲ್ಲಿ 6 ರಿಂದ 8ನೇ ತರಗತಿ ಶಾಲೆಗಳನ್ನ ಆರಂಭಿಸಲಾಗುತ್ತದೆ. ಆದರೆ ಕೊರೋನಾ 2ನೇ ಅಲೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗಗಳಲ್ಲಿ 6 ಮತ್ತು 7ನೇ ತರಗತಿಯನ್ನ ಆರಂಭವಿಲ್ಲ. 8ನೇ ತರಗತಿ ಮೇಲ್ಪಟ್ಟ ತರಗತಿಗಳನ್ನ ಆರಂಭಿಸಲಾಗುವುದು ಎಂದು ನುಡಿದರು.
9, 10ನೇ ತರಗತಿ, ಪಿಯು ಕಾಲೇಜುಗಳಲ್ಲಿ ಹಾಜರಾತಿ ಉತ್ತಮವಾಗಿದೆ. 1 ರಿಂದ 8ನೇ ತರಗತಿ ಆರಂಭಕ್ಕೆ ಪೋಷಕರು ಒತ್ತಾಯ ಮಾಡಿದ್ದಾರೆ. ತರಗತಿಗೆ ಹಾಜರಾಗುವಂತೆ ನಾವು ಕಡ್ಡಾಯ ಮಾಡಿರಲಿಲ್ಲ. ನಾಳೆ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಇದೆ. ಫೆಬ್ರವರಿ 24 ಅಥವಾ 25 ರಂದು ಮತ್ತೆ ಸಭೆ ಮಾಡ್ತೇವೆ ಎಂದರು.
ವಿದ್ಯಾರ್ಥಿಗಳು ಶಾಳೆಗೆ ಬರುವುದು ಕಡ್ಡಾಯವಲ್ಲ. ಆದರೆ ಪೋಷಕರ ಒಪ್ಪಿಗೆ ಕಡ್ಡಾಯ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
Key words: no beginning – 6th and 7th– class- schools-bangalore city-kerala border