ಮೈಸೂರು ಜಿಪಂ  ನೂತನ ಸಿಇಓ ಆಗಿ ಎ.ಎಂ ಯೋಗೇಶ್ ಅಧಿಕಾರ ಸ್ವೀಕಾರ…

ಮೈಸೂರು,ಫೆಬ್ರವರಿ,17,2021(www.justkannada.in):  ಮೈಸೂರು ಜಿಲ್ಲಾ ಪಂಚಾಯತ್ ನ  ನೂತನ ಸಿಇಓ ಆಗಿ ಎ. ಎಂ ಯೋಗೇಶ್ ಅಧಿಕಾರ ಸ್ವೀಕರಿಸಿದರು.jk

ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ನೂತನ‌ ಸಿಇಓ ಆಗಿ ಯೋಗೇಶ್ ಅಧಿಕಾರ ಸ್ವೀಕರಿಸಿದರು. ಯೋಗೇಶ್ 2004ರ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಪ್ರಾದೇಶಿಕ ಆಯುಕ್ತರ ಕಛೇರಿಯಲ್ಲಿ ಯೋಗೇಶ್ ಹೆಚ್ಚುವರಿ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು.  ಅಲ್ಲದೆ ಮುಡಾ, ಕಾಡಾದಲ್ಲಿ ಕೆಲಸ ನಿರ್ವಹಿಸಿದ್ದಾರೆ.

am-yogesh-takes-charge-ceo-mysore-zilla-panchayath
ಕೃಪೆ- internet

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಸಿಇಓ ಯೋಗೇಶ್,  ಮೈಸೂರಿಗೂ ನನಗೂ ಅವಿನಾಭಾವ ಸಂಬಂಧ ಇದೆ. ಮೈಸೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವುದೇ ನನ್ನ ಗುರಿ ಎಂದು ಹೇಳಿದರು.

Key words: AM Yogesh- takes –charge- CEO – Mysore- zilla panchayath