ಮೈಸೂರು,ಫೆಬ್ರವರಿ,17,2021(www.justkannada.in): ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಸಾ.ರಾ ಮಹೇಶ್ , ನಾವೆಲ್ಲಾ ಜೆಡಿಎಸ್ ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ತಿಳಿಸುತ್ತೇವೆ. ಎಲ್ಲರ ತೀರ್ಮಾನದಂತೆ ಮುಂದಿನ ನಿರ್ಧಾರ ಆಗಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಭೇಟಿ ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಸಾ.ರಾ.ಮಹೇಶ್, ನಾವೆಲ್ಲಾ ಸ್ಥಳೀಯವಾಗಿ ಚೆನ್ನಾಗಿದ್ದೇವೆ. ನಮ್ಮ ನಡುವೆ ಯಾವುದೇ ಸಮನ್ವಯದ ಕೊರತೆ ಇಲ್ಲ. ಆದ್ರೆ ರಾಜ್ಯಮಟ್ಟದಲ್ಲಿ ಸ್ವಲ್ಪ ತಿಕ್ಕಾಟ ಇದೆ. ಆ ತಿಕ್ಕಾಟದಿಂದಲೇ ಈ ಮೇಯರ್ ಸ್ಥಾನದ ತಿಕ್ಕಾಟ ಉಂಟಾಗಿದೆ ಎಂದರು.
ಕೇಂದ್ರದಲ್ಲೂ ಚೆನ್ನಾಗಿದ್ದೇವೆ, ಜಿಲ್ಲಾ ನಗರ ಕೇಂದ್ರದಲ್ಲೂ ಚೆನ್ನಾಗಿದ್ದೇವೆ. ಹಾಗಾಗಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ರಾಜ್ಯಮಟ್ಟದಲ್ಲಿ ಸ್ವಲ್ಪ ಗೊಂದಲ ಇದೆ. ಹಾಗಾಗಿ ಜೆಡಿಎಸ್ ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ತಿಳಿಸುತ್ತೇವೆ. ಎಲ್ಲರ ತೀರ್ಮಾನದಂತೆ ಮುಂದಿನ ನಿರ್ಧಾರ ಆಗಲಿದೆ ಎಂದು ಸಾ.ರಾ ಮಹೇಶ್ ತಿಳಿಸಿದರು.
ರಾಜ್ಯಮಟ್ಟದಲ್ಲಿ ಉಪಸಭಾಪತಿ ಸ್ಥಾನವನ್ನ ಕೊಟ್ಟದ್ದಕ್ಕೆ ಅವರು ಸಭಾಪತಿ ಕೊಟ್ಟಿದ್ದು. ಇಲ್ಲಿಯೂ ಅಷ್ಟೆ. ಕೊಟ್ಟು ತಗೋಬೇಕಾಗಿದೆ. ಅದನ್ನ ಬಿಟ್ಟರೆ ಮತ್ತೇನು ಇಲ್ಲ. ಕೆಲವರು ಜೆಡಿಎಸ್ ಎಲ್ಲಿದೆ ಅಂತಾರೆ ? ಇನ್ನು ಕೆಲವರು ನಾವು ಯಾರೊಂದಿಗೂ ಹೋಗೋದೆ ಇಲ್ಲ ಅಂತಾರೆ. ಆ ಮಾತುಗಳಿಂದಲೇ ಗೊಂದಲ ಸೃಷ್ಟಿಯಾಗಿದೆ. ಆದ್ರೆ ವರಿಷ್ಠರ ಗಮನಕ್ಕೆ ತಂದು ಎಲ್ಲವನ್ನು ನಿರ್ಧಾರ ಮಾಡ್ತಿವಿ. ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ನಾವು ಮಾತನಾಡಿದ್ದು ನಿಜ. 2 ವರ್ಷ ಕಾಂಗ್ರೆಸ್ ಗೆ 3 ವರ್ಷ ಜೆಡಿಎಸ್ ಗೆ ಅನ್ನೋ ಮಾತುಕತೆ ಆಗಿತ್ತು. ಈಗ ಅದನ್ನ ವರಿಷ್ಠರಿಗೆ ತಿಳಿಸಿ ತೀರ್ಮಾನ ಮಾಡಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಸ್ಪಷ್ಟನೆ ನೀಡಿದರು.
ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿ ಮಾಜಿ ಸಚಿವ ಸಾ.ರಾ ಮಹೇಶ್, ನಾನು ಯಡಿಯೂರಪ್ಪರನ್ನ ಭೇಟಿ ಮಾಡಿದ್ದು ಖಾಸಗಿಯಾಗಿ. ಅದರಲ್ಲಿ ಯಾವುದೇ ರಾಜಕೀಯ ಇಲ್ಲ.ಈ ಹಿಂದೆ ಕಲ್ಯಾಣ ಮಂಟಪದಲ್ಲಿ ದೇವೆಗೌಡರ ಭಾವಚಿತ್ರವನ್ನ ಯಡಿಯೂರಪ್ಪನವರೇ ಉದ್ಘಾಟನೆ ಮಾಡಿದ್ರು. ಅದಕ್ಕೂ ಮಿಗಿಲಾಗಿ ನಾನು ಸಂಬಂಧಿಕರ ಮದುವೆಗೆ ಹೋಗಿದ್ದು. ಅಲ್ಲಿ ಯಾವುದೇ ರಾಜಕೀಯ ಮಾತುಕತೆ ನಡೆದಿಲ್ಲ ಎಂದು ಹೇಳಿದರು.
Key words: Mysore -city –corporation-alliance – MLA- sara Mahesh