ಬೆಂಗಳೂರು,ಫೆಬ್ರವರಿ,18,2021(www.justkannada.in) : ಸಿಲಿಕಾನ್ ಸಿಟಿ ಕಳೆದ ಎರಡು ವರ್ಷದಿಂದ ಸಾಕಷ್ಟು ನಿರ್ಲಕ್ಷಕ್ಕೆ ಒಳಗಾಗಿದೆ. ಶೀಘ್ರವಾಗಿ ಬಿಬಿಎಂಪಿ ಚುನಾವಣೆ ಆಗಬೇಕು ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಅಂತರರಾಷ್ಟ್ರೀಯ ಖ್ಯಾತಿ ಪಡೆದಿದೆ. ಅದರ ಅಭಿವೃದ್ಧಿಗೆ ದೂರದೃಷ್ಠಿ ಇಟ್ಟುಕೊಂಡು ರೂಪುರೇಷೆ ಕೊಡಬೇಕು. ಈ ಬಗ್ಗೆ ಇಲ್ಲಿನ ಶಾಸಕರ ಜೊತೆ ಚರ್ಚಿಸುತ್ತಿದ್ದಾರೆ. ಚುನಾವಣೆ ತಯಾರಿ ಕುರಿತು ಚರ್ಚೆ ನಡೆದಿದೆ. ಕಾಂಗ್ರೆಸ್ ಪ್ರತ್ಯೇಕ ರೂಪುರೇಷೆಗೆ ನಿರ್ಧರಿಸಿದೆ ಎಂದಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ
ಜನ ಆದಾಯ, ಉದ್ಯೋಗ ಕಳೆದುಕೊಂಡಿದ್ದಾರೆ. ಬೆಲೆ, ತೆರಿಗೆ ಏರಿಸಿ ಜನರ ನೆಮ್ಮದಿ ಕಿತ್ತುಕೊಳುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ, ಸಿಎಲ್ಪಿ , ಕೆಪಿಸಿಸಿ ಅಧ್ಯಕ್ಷರು ಒಪ್ಪಿಗೆ ಕೊಟ್ಟಿದ್ದಾರೆ
ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿ, ಈಗಾಗಲೇ ಸುಮಾರು ಚರ್ಚೆ ನಡೆದಿದೆ. ನಮ್ಮ ಕಾರ್ಯಕರ್ತರ ಸಲಹೆ ಪಡೆದುಕೊಂಡಿದ್ದೇವೆ. ಶರತ್ ಕೂಡ ನಮ್ಮ ನಾಯಕರನ್ನ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ್ದಾರೆ. ಇಂದು ಸುರ್ಜೇವಾಲಾರನ್ನ ಭೇಟಿ ಮಾಡಬಹುದು. ಯಾವಾಗ ಸೇರಬೇಕೆಂದು ನಂತರ ನಿರ್ಧಾರವಾಗಲಿದೆ. ಸಿಎಲ್ಪಿ , ಕೆಪಿಸಿಸಿ ಅಧ್ಯಕ್ಷರು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
key words : Silicon City-two years-Enough-ignore-undergone-Former Minister-Krishna Bhairaygowda-Accused