ಬೆಂಗಳೂರು,ಫೆಬ್ರವರಿ,18,2021(www.justkannada.in) : ರಾಮಮಂದಿರ ನಿರ್ಮಾಣಕ್ಕೆ ಹಣ ನೀಡಿದವರೇ ಸುಮ್ಮನಿದ್ದಾರೆ. ಲೆಕ್ಕ ಕೇಳುವುದಕ್ಕೆ ಇವರು ಯಾರು ಎಂದು ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ಎಚ್.ಡಿ.ಕೆ ಗೆ ಧಮ್ಕಿ ಹಾಕುವಂತಹವರು ರಾಜ್ಯದಲ್ಲಿ ಯಾರು ಇದ್ದಾರೆ?
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಧಮ್ಕಿ ಹಾಕಿದ್ದಾರೆ ಎಂದು ಹೇಳಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಎಚ್.ಡಿ.ಕೆ ಗೆ ಧಮ್ಕಿ ಹಾಕುವಂತಹವರು ರಾಜ್ಯದಲ್ಲಿ ಯಾರು ಇದ್ದಾರೆ?, ಅವರೇ ಶಾಸಕರಿಗೆ ಧಮ್ಕಿ ಹಾಕುತ್ತಾರೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಮತ್ತು ಎಚ್.ಡಿ.ಕೆ ಅವರಿಗೆ ಒಂದು ರೀತಿಯ ಚಾಳಿ. ಹಣ ಕೊಟ್ಟವರೆ ಸುಮ್ಮನಿರುವಾಗ ಲೆಕ್ಕ ಕೇಳುವುದಕ್ಕೆ ಇವರು ಯಾರು ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಒಬ್ಬ ವಕೀಲ
ಸಿದ್ದರಾಮಯ್ಯ ಒಬ್ಬ ವಕೀಲನಾಗಿದ್ದು, ಕಾನೂನಿನ ಬಗ್ಗೆ ಗೌರವವಿದ್ದರೆ ಹೀಗೆ ಮಾತನಾಡಬಾರದು. ದೇಣಿಗೆ ನೀಡಲು ಇಷ್ಟವಿದ್ದರೆ ಕೊಡಲಿ, ಇಲ್ಲದಿದ್ದರೆ ಬೇಡ. ಅವರೂರಿನಲ್ಲಿ ಮಸೀದಿ, ಚರ್ಚ್ ನಿರ್ಮಿಸಲಿ. ಸುಮ್ಮನೆ ಈ ರೀತಿ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
english summary…
While donors are keeping quiet, who are they to question? Minister R. Ashok on former CMs
Bengaluru, Feb. 18, 2021 (www.justkannada.in): “People who have given donations for Ram Mandir construction are keeping quiet. Who are these people to ask us to give details?” This is how Revenue Minister R. Ashok expressed his ire upon former Chief Minister H.D.Kumaraswamy.
Responding to presspersons’ question on threatening former Chief Minister H.D. Kumaraswamy over the collection of donations for the construction of Ram Mandir in Ayodhya, Minister R. Ashok said, “Who is there in the State who dares to threaten HDK? He himself will threaten MLAs.”
“Congress and HDK have a kind of habit. Who are they to ask us when the people who have given donations themselves are keeping quiet,” he questioned.
Keywords: Minister R. Ashok/ former CMs/ HDK/ Siddaramaiah/ Donations/ Ram Mandir
key words : Money-gave-account-Who-are-these?-Former CMs-opposite-Minister-R.Ashok