ನವದೆಹಲಿ,ಫೆಬ್ರವರಿ,21,2021(www.justkannada.in): ಅಂತರರಾಜ್ಯ ಜಲ ವಿವಾದಗಳ ಬಗ್ಗೆ ಕಾನೂನು ತಜ್ಞರು ಹಾಗೂ ತಾಂತ್ರಿಕ ಸಲಹೆಗಾರರ ಜತೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದು ಸಭೆ ನಡೆಸಿ ಚರ್ಚಿಸಿದರು.
ಸಚಿವ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನವದೆಹಲಿಯ ಕರ್ನಾಟಕ ಭವನದಲ್ಲಿ ಇಂದು (ಭಾನುವಾರ) ಕೃಷ್ಣ, ಕಾವೇರಿ ಮಹದಾಯಿ ಹಾಗೂ ಅಂತರರಾಜ್ಯ ಜಲ ವಿವಾದಗಳ ಕುರಿತ ಹಾಗೂ ಘನತೆವೆತ್ತ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಸ್ತಾವನೆಗಳ ಬಗ್ಗೆ ಕಾನೂನು ತಜ್ಞರು ಹಾಗೂ ತಾಂತ್ರಿಕ ಸಲಹೆಗಾರರೊಂದಿಗೆ ಸಭೆ ನಡೆಯಿತು.
ಈ ಸಭೆಯಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸೀನಿಯರ್ ಅಡ್ವೋಕೇಟ್ ಮೋಹನ ಕಾತರಕಿ, ಅಡ್ವೋಕೇಟ್ ವಿ. ಎನ್. ರಘುಪತಿ, ನಿಶಾಂತ ಪಾಟೀಲ್, ರಾಜೇಶ್ವರ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳಾದ ಅನೀಲ್ ಕುಮಾರ್, ಜಲ ಸಂಪನ್ಮೂಲ ಸಚಿವರ ವಿಶೇಷ ಕರ್ತವ್ಯಾಧಿಕಾರಿ ರುದ್ರಯ್ಯ, ಅಂತರರಾಜ್ಯ ಜಲ ವಿಭಾಗದ ಮುಖ್ಯ ಇಂಜಿನೀಯರ್ ಅಜೀಜ್ ಹುಸೇನ್, ಜಲಸಂಪನ್ಮೂಲ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಮೋಹನ್ ಕುಮಾರ್, ಅಂತರರಾಜ್ಯ ಜಲ ವಿಭಾಗದ ಸಲಹೆಗಾರರಾದ ಬಂಗಾರ ಸ್ವಾಮಿ, ಪ್ರಧಾನ ತಾಂತ್ರಿಕ ಸಲಹೆಗಾರರಾದ ಶ್ರೀರಾಮಯ್ಯ ಮತ್ತಿತರರು. ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Key words: Minister- Ramesh jarakiholi – meeting – legal experts – technical consultants – water disputes.