ಮೈಸೂರು,ಫೆಬ್ರವರಿ,24,2021(www.justkannada.in): ಮೈಸೂರು ಮೇಯರ್ ಹಾಗೂ ಉಪಮೇಯರ್ ಚುನಾವಣೆ ಬಾರಿ ಕುತೂಹಲ ಕೆರಳಿಸಿದ್ದು ಚುನಾವಣೆಯಲ್ಲಿ ಪಕ್ಷೇತರರು ಹಾಗೂ ಬಿಎಸ್ಪಿ ಸದಸ್ಯರು ಕಿಂಗ್ ಮೇಕರ್ ಆಗಿದ್ದಾರೆ.
ಸದ್ಯ ಮೈಸೂರು ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು ಯಾರಿಗು ಬಹುಮತ ಇಲ್ಲ. ಹೀಗಾಗಿ ಮೈಸೂರು ಮೇಯರ್ ಆಯ್ಕೆಗೆ ಪಕ್ಷೇತರರು ಹಾಗೂ ಬಿಎಸ್ಪಿ ಸದಸ್ಯರು ಕಿಂಗ್ ಮೇಕರ್ ಆಗಿದ್ದಾರೆ.
ಮೈಸೂರು ಪಾಲಿಕೆಯಲ್ಲಿ 5 ಪಕ್ಷೇತರ 1 ಬಿಎಸ್ಪಿ ಸದಸ್ಯರಿದ್ದು ಯಾವ ಪಕ್ಷಕ್ಕೆ ಪಕ್ಷೇತರರ ಸಪೋರ್ಟ್ ಸಿಗಲಿದೆ ಕಾದು ನೋಡಬೇಕಿದೆ.
ಜೆಡಿಎಸ್ ನಿರ್ಧಾರದಿಂದ ಬಿಜೆಪಿ ಲಾಭ!.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದು, ಜನಪ್ರತಿನಿಧಿಗಳ ಓಟಿನಿಂದ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆಯಲಿದ್ದಾರೆ. ಒಟ್ಟು 22 ಸದಸ್ಯರು 3 ಜನಪ್ರತಿನಿಧಿಗಳು ಸೇರಿ 25 ಸದಸ್ಯರ ಸಂಖ್ಯೆಯಾಗಲಿದೆ. ಹೀಗಾಗಿ ಬಹುತೇಕ ಮೇಯರ್ ಉಪಮೇಯರ್ ಎರಡು ಸ್ಥಾನವನ್ನ ಬಿಜೆಪಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Key words: Mysore mayor- King Maker- Non-party – BSP -members