ಮೈಸೂರು ಮೇಯರ್ ಚುನಾವಣೆ ಮೈತ್ರಿ ವಿಚಾರ:  ವರದಿ ಸಂಗ್ರಹಿಸಲು ಇಂದು ಮೈಸೂರಿಗೆ  ಎಐಸಿಸಿ ವಕ್ತಾರ ಮಧುಯಕ್ಷಿಗೌಡ…

ಮೈಸೂರು,ಮಾರ್ಚ್,2,2021(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್  ಚುನಾವಣೆಯಲ್ಲಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ  ಕಾಂಗ್ರೆಸ್ ನಾಯಕರ ಕಲಹದ ಬಗ್ಗೆ ವರದಿ ಸಂಗ್ರಹಿಸಲು ಎಐಸಿಸಿ ವಕ್ತಾರ ಮಧುಯಕ್ಷಿಗೌಡ ಇಂದು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ.jk

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆ ಮೆರೆಗೆ ರಾಜ್ಯ ಕಾಂಗ್ರೆಸ್ ನಾಯಕರನ್ನ ಎಐಸಿಸಿ ವಕ್ತಾರ ಮಧುಯಕ್ಷಿ  ಭೇಟಿಯಾಗಲಿದ್ದು, ಮೈಸೂರು ಕಾಂಗ್ರೆಸ್ ಪಾಲಿಕೆ ಸದಸ್ಯರ ಬಳಿ ಮಾಹಿತಿ ಕಲೆ ಹಾಕಲಿದ್ದಾರೆ.  ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಹಾಗೂ ಶಾಸಕ ತನ್ವೀರ್ ಸೇಠ್‌ ರನ್ನು ಮಧುಯಕ್ಷಿಗೌಡ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

Mysore- Mayor -Election –Alliance-AICC spokesperson- Madhu Yakshigowda – Mysore- today
ಕೃಪೆ -internet

ಈ ಮೂಲಕ ಚುನಾವಣೆ ಮುಗಿದರೂ ಸಹ  ಕಾಂಗ್ರೆಸ್ ನಾಯಕರ ಕಲಹ ಇನ್ನು ಮುಗಿದಿಲ್ಲವೆಂಬಂತೆ ಕಾಣುತ್ತಿದೆ. ಮೈತ್ರಿ ಬಗ್ಗೆ ಸಿದ್ದರಾಮಯ್ಯ ಮೌನವಾಗಿರುವ ಹಿನ್ನಲೆಯಲ್ಲಿ ಹೈಕಮಾಂಡ್‌ ನಿಂದಲೇ ಪಾಲಿಕೆ ಮೈತ್ರಿ ವಿಚಾರ ಪ್ರಸ್ತಾಪವಾಗಿದ್ದು, ಹೀಗಾಗಿ ಮಧುಯಕ್ಷಿಗೌಡ ಅವರ ಮೈಸೂರು ಭೇಟಿ ಭಾರಿ ಕುತೂಹಲ ಮೂಡಿಸಿದೆ.

Key words: Mysore- Mayor -Election –Alliance-AICC spokesperson- Madhu Yakshigowda – Mysore- today