ಬೆಂಗಳೂರು,ಮಾರ್ಚ್,3,2021(www.justkannada.in): ಬಿಡದಿಯ ಟೊಯೋಟಾ-ಕಿರ್ಲೊಸ್ಕರ್ ಕಂಪನಿ ಮತ್ತು ಕಾರ್ಮಿಕರ ನಡುವೆ ಇದ್ಧ ಬಿಕ್ಕಟ್ಟು ಸುಖಾಂತ್ಯವಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಅಶ್ವಥ್ ನಾರಾಯಣ್, ಬಿಡದಿಯ ಟೊಯೋಟಾ-ಕಿರ್ಲೊಸ್ಕರ್ ಕಂಪನಿಯ ತಯಾರಿಕಾ ಘಟಕದಲ್ಲಿ ನಡೆಯುತ್ತಿದ್ದ ಕಾರ್ಮಿಕರ ಹಾಗೂ ಕಂಪನಿಯ ಮಧ್ಯೆ ಇದ್ದ ಬಿಕ್ಕಟ್ಟು ಇತ್ಯರ್ಥವಾಗಿ ಸುಖಾಂತ್ಯ ಕಂಡಿದೆ.
ಸಮಸ್ಯೆಗಳನ್ನು ಬಗೆಹರಿಸಿ ಮತ್ತೆ ಕಾರ್ಯನಿರ್ವಹಿಸಲು ಬರುತ್ತಿರುವ ಕಾರ್ಮಿಕರಿಗೆ, ಅವರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದ ಕಂಪನಿಯ ಪ್ರತಿನಿಧಿಗಳಿಗೆ ಅಭಿನಂದನೆಗಳು..! ಎಂದು ಟ್ವೀಟ್ ಮಾಡಿದ್ದಾರೆ.
Key words: crisis- between – Toyota-Kirloskar -Company – workers-DCM- Ashwath Narayan.