ಮೈಸೂರು,ಮಾರ್ಚ್,03,2021(www.justkannada.in) : ಕಾಡಾನೆ ದಾಳಿಗೆ ತುತ್ತಾಗಿ ಹುತಾತ್ಮರಾದ ಮಣಿಕಂದನ್ (ಐ.ಎಫ್.ಎಸ್) ಅವರಿಗೆ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ‘ಎಲಿಫೆಂಟ್ ವಾರಿಯರ್’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವ ಸೂಚಿಸಲಾಗಿದೆ.
ವಿಶ್ವ ವನ್ಯಜೀವಿ ದಿನವಾದ ಮಾರ್ಚ್ 3ರ ಈ ದಿನದಂದು 2018ರಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ಮಣಿಕಂದನ್ (ಐ.ಎಫ್.ಎಸ್) ಅವರು ಕಾಡಿನೊಳಗೆ ಕರ್ತವ್ಯದಲ್ಲಿದ್ದಾಗ ಏಕಾಏಕಿ ದಾಳಿ ನಡೆಸಿದ ಕಾಡಾನೆ ದಾಳಿಗೆ ತುತ್ತಾಗಿ ಹುತಾತ್ಮರಾದರು.
ಡಾ.ಮಣಿಕಂದನ್ ಅವರ ಸ್ಮರಣೆಯಲ್ಲಿ ಕಾಡು ಹಾಗೂ ಕಾಡುಪ್ರಾಣಿಗಳ ರಕ್ಷಣೆಗಾಗಿ ಅಮೂಲ್ಯ ಪ್ರಾಣತ್ಯಾಗ ಮಾಡಿದ ಅವರ ತ್ಯಾಗ ಬಲಿದಾನಗಳು ಸದಾ ಅಮರ. ಅವರ ಕರ್ತವ್ಯ ಪ್ರಜ್ಞೆಗೆ ಕೋಟಿ ಪ್ರಾಣಾಮಗಳು ಎಂದು ತಿಳಿಸಿದೆ.
key words : Dr.S.Manikandan-Post-mortem-Elephant-Warrior- Award