ಬೆಂಗಳೂರು,ಮಾರ್ಚ್,5,2021(www.justkannada.in): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಬಿಡುಗಡೆ ಮಾಡಿದ್ದ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
ದಿನೇಶ್ ಕಲ್ಲಹಳ್ಳಿ ಅವರು ತಮಗೆ ಸೂಕ್ತ ಭದ್ರತೆ ನೀಡುವವರೆಗೂ ಪೊಲೀಸರ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಪೊಲೀಸ್ ಠಾಣೆಗೆ ದಿನೇಶ್ ಕಲ್ಲಹಳ್ಳಿ ಹಾಜರಾಗಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ನನಗೆ ಪೊಲೀಸ್ ಭದ್ರತೆ ನೀಡಿಲ್ಲ ಆದರೂ ಬಂದಿದ್ದೇನೆ. ವಿಚಾರಣೆಗೆ ಸಹಕಾರ ನೀಡುತ್ತೇನೆ. ತನಿಖೆಗೆ ಬೇಕಾದ ಪೂರಕ ದಾಖಲೆಗಳನ್ನ ಇಂದು ಒದಗಿಸುತ್ತೇನೆ ಎಂದರು.
ಪೊಲೀಸರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತನಿಖೆಗೆ ಪೂರಕವಾದ ಮಾಹಿತಿಯನ್ನು ನೀಡಿದ್ದು, ದೂರಿನಲ್ಲಿರುವ ಸತ್ಯಾಸತ್ಯಾತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿ ಎಂದರು. ಹಾಗೆಯೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಯನ್ನ ಸ್ವಾಗತಿಸುತ್ತೇನೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದರು.
Key words: ramesh jarkiholi- CD –release-Dinesh Kallahalli- attending -hearing