ಬೆಂಗಳೂರು,ಮಾರ್ಚ್,06,2021(www.justkannada.in) : ಸಿಎಂ ಬಿ.ಎಸ್.ವೈ ಗೆ ಕೆಲ ಸಚಿವರಿಂದ ಹೆದರಿಸುವ ಕೆಲಸ ನಡೆಯುತ್ತಿದೆ. ಜನಸಾಮಾನ್ಯರ ಕೆಲಸ ಮಾಡುವ ಬದಲು ಅವರವರ ರಕ್ಷಣೆಗಿಳಿದಿದ್ದಾರೆ ಎಂದು ರಾಜ್ಯ ಸಚಿವರ ಕಾರ್ಯವೈಖರಿ ವಿರುದ್ಧ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿಡಿ ಬಿಡುಗಡೆ ಭಯದಲ್ಲಿ ನ್ಯಾಯಾಲಯದ ಮೊರೆ ಹೋಗಿ ಮುಂಚಿತವಾಗಿಯೇ ತಡೆಯಾಜ್ಞೆ ತಂದಿದ್ದಾರೆ. ನಮ್ಮ ಸಿಡಿಗಳು ಎಲ್ಲಿ ಬಯಲಿಗೆ ಬರುತ್ತೋ ಎಂದು ಭಯಭೀತರಾಗಿದ್ದಾರೆ. ಬಿಜೆಪಿ ಅವರ ಸಮಸ್ಯೆ, ಜಗಳವೇ ಇನ್ನು ಸರಿಯಾಗಿಲ್ಲ. ಇನ್ನು ಬಡ ಜನರ ಕೆಲಸ ಮಾಡಿಕೊಡಲು ಇವರಿಗೆ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ಸ್ಥಳೀಯ ಶಾಸಕರು ಯಾವ ಬೀದಿ ಸುತ್ತಿದರು, ಎಲ್ಲಿ ಬರುತ್ತಿದ್ದರು ನೋಡಿದ್ದೀರಾ?, ಗೆದ್ದು 5 ವರ್ಷ ಸುಮ್ಮನ್ನೇ ಮನೆಯಲ್ಲಿ ಇರುತ್ತಾರೆ. 5 ವರ್ಷದ ನಂತರ ಅವರು ಮನೆಯಿಂದ ಆಚೆ ಬರುತ್ತಾರೆ ಎಂದು ಶಾಸಕ ರಾಮದಾಸ್ ವಿರುದ್ಧವು ಆಕ್ರೋಶ ಹೊರಹಾಕಿದರು.
ಬಡವರಿಗೆ ಪೆನ್ಷನ್ ಕೊಡದಷ್ಟು ದರಿದ್ರ ಈ ಸರ್ಕಾರಕ್ಕೆ ಬಂದಿದೆಯಾ?
ಬಡವರಿಗೆ ಪೆನ್ಷನ್ ಕೊಡದಷ್ಟು ದರಿದ್ರ ಈ ಸರ್ಕಾರಕ್ಕೆ ಬಂದಿದೆಯಾ?. ಈ ಸರ್ಕಾರ ನಿರ್ಗತಿಕ ಸರ್ಕಾರವಾಗಿದೆ. ಬಡವರ ಮೇಲೆ ಯಾವುದೇ ಕರುಣೆ ಈ ಸರ್ಕಾರಕ್ಕೆ ಇಲ್ಲ. ಸರ್ಕಾರದಲ್ಲಿ ಇಚ್ಛಾ ಶಕ್ತಿಯ ಕೊರತೆ ಇದೆ. ಸರ್ಕಾರದಲ್ಲಿ ಅಭಿವೃದ್ಧಿಗೆ ಹಣಕಾಸೆ ಇಲ್ಲ ಎಂದು ಕಿಡಿಕಾರಿದರು.
ಅಂಗವಿಕಲ, ವಿಧವಾ ಮತ್ತು ವೃದ್ಧಾಪ್ಯ ವೇತನ ನೀಡದೆ ವಿಳಂಬ. ಬಹುತೇಕ ಮಂದಿ ಬಡ ಅಂಗವಿಕಲ, ವೃದ್ಧ ಮತ್ತು ವಿಧವೆಯರಿಗೆ ೪ ರಿಂದ ೭ ತಿಂಗಳುಗಳಿಂದ ಪೆನ್ಷನ್ ನೀಡುತ್ತಿಲ್ಲ. ಈ ಬಗ್ಗೆ ತಾಲೂಕು ಕಚೇರಿಗೆ ತೆರಳಿ ನಿರಂತರವಾಗಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.
ಅಧಿಕಾರಿಗಳು ಸರ್ಕಾರದಿಂದ ಹಣ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ೬೦೦ ರೂ. ಪೆನ್ಷನ್ ನೀಡದಷ್ಟು ಗತಿ ಇಲ್ಲದಾಗಿದೆಯೇ ಈ ಸರ್ಕಾರಕ್ಕೆ?, ಸರ್ಕಾರದ ಖಜಾನೆ ಖಾಲಿ ಆಗಿದೆಯೇ ಅಥವಾ ದರಿದ್ರ ಬಂದಿದೆಯೇ ಈ ಸರ್ಕಾರಕ್ಕೆ?, ಇಲ್ಲಿನ ಸ್ಥಳೀಯ ಶಾಸಕರು ಕೇವಲ ವೋಟ್ ಗಾಗಿ ಮಾತ್ರ ಬರುತ್ತಾರೆ. ಬಡವರ ಕಷ್ಟಕ್ಕೆ ಸ್ಪಂದಿಸಲ್ಲ ಎಂದು ಕಿಡಿಕಾರಿದರು.
key words : CM-B.S.Y-some-minister-Scary-Work-progress-Former-MLA-M.K.Somashekhar