ಬೆಂಗಳೂರು,ಮಾರ್ಚ್,07,2021 (www.justkannada.in) : ನೈಋತ್ಯ ರೈಲ್ವೆ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಹೊಸಪೇಟೆಗೆ ಪ್ರತಿನಿತ್ಯ ಸಾಮಾನ್ಯ ದರದಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದ್ದು, ರೈಲುಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಎಸ್.ಎಸ್.ಎಸ್.ಹುಬ್ಬಳ್ಳಿ-ಕೆ.ಎಸ್.ಆರ್.ಬೆಂಗಳೂರು ನಡುವೆ ಮಾರ್ಚ್ 10ರಿಂದ ಪ್ರತಿದಿನ ರೈಲು ಸಂಚಾರ ನಡೆಸಲಿದೆ. ಕೆ. ಎಸ್. ಆರ್. ಬೆಂಗಳೂರು-ಹೊಸಪೇಟೆ ನಡುವೆ ಮಾರ್ಚ್ 11ರಿಂದ ರೈಲು ಸಂಚಾರ ನಡೆಸಲಿದೆ ಎಂದರು.
ಮಾರ್ಚ್ 10 ರಂದು ಸಂಜೆ 6 ಕ್ಕೆ 06242 ನಂಬರ್ ರೈಲು ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 4 ಗಂಟೆಗೆ ಬೆಂಗಳೂರು ತಲುಪಲಿದೆ. ಮಾರ್ಚ್ 12 ರಂದು ಕೆ. ಎಸ್. ಆರ್. ಬೆಂಗಳೂರು ನಿಲ್ದಾಣದಿಂದ 06241 ನಂಬರ್ ರೈಲು ರಾತ್ರಿ 11.55ಕ್ಕೆ ಹೊರಟು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.
ಬೆಂಗಳೂರು-ಹೊಸಪೇಟೆ; ಮಾರ್ಚ್ 11ರಂದು ಬೆಳಗ್ಗೆ 5 ಗಂಟೆಗೆ ಕೆ. ಎಸ್. ಆರ್. ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು 06243 ನಂಬರ್ ರೈಲು ಮಧ್ಯಾಹ್ನ 3.45ಕ್ಕೆ ಹೊಸಪೇಟೆ ತಲುಪಲಿದೆ. ಮಾರ್ಚ್ 12ರಂದು ಮಧ್ಯಾಹ್ನ 12.10ಕ್ಕೆ ಹೊಸಪೇಟೆಯಿಂದ ಹೊರಡುವ ರೈಲು ಬೆಂಗಳೂರಿಗೆ ರಾತ್ರಿ 10.45ಕ್ಕೆ ಆಗಮಿಸಲಿದೆ.
ಹೊಸಪೇಟೆ–ಹರಿಹರ ರೈಲು; ನೈಋತ್ಯ ರೈಲು ಹೊಸಪೇಟೆ-ಹರಿಹರ ನಡುವೆ ಪ್ರತಿದಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ. ಮಾರ್ಚ್ 11ರಂದು ಹೊಸಪೇಟೆಯಿಂದ ಸಂಜೆ 4 ಗಂಟೆಗೆ ಹೊರಡುವ ರೈಲು ರಾತ್ರಿ 9.15ಕ್ಕೆ ಹರಿಹರ ತಲುಪಲಿದೆ. ಮಾರ್ಚ್ 12ರಂದು ಹರಿಹರದಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ರೈಲು 11.45ಕ್ಕೆ ಹೊಸಪೇಟೆ ತಲುಪಲಿದೆ.
ಈ ರೈಲು ತುಂಗಭದ್ರಾ ಡ್ಯಾಂ, ವ್ಯಾಸನಕೇರಿ, ವ್ಯಾಸ ಕಾಲೋನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಮಳವಿ, ಕೊಟ್ಟೂರು, ಬೆಣ್ಣೆಹಳ್ಳಿ, ಹನಪನಹಳ್ಳಿ, ತೆಲಿಗಿ, ಅಮರಾವತಿ ಕಾಲೋನಿ, ದಾವಣಗೆರೆ, ತೋಳಹುಣಸೆ, ದಾವಣಗೆರೆ ನಿಲ್ದಾಣದಲ್ಲಿ ನಿಲ್ಲಲಿದೆ.
key words : Bangalore-Hubli-new packet-General-rate-Special-Express-Train