“ಹೆಲಿಟೂರಿಸಂ ಗೆ ಪ್ರಮೋದಾದೇವಿ ಒಡೆಯರ್ ಸಕಾರಾತ್ಮಕ ಸ್ಪಂದನೆ” : ಸಚಿವ ಯೋಗೇಶ್ವರ್

ಮೈಸೂರು,ಮಾರ್ಚ್,07,2021(www.justkannada.in) : ಹೆಲಿಟೂರಿಸಂ ವಿಚಾರವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜೊತೆ ಮಾತಾಡಿದ್ದೇನೆ. ಅವರು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

jk

ಬೆಂಗಳೂರು ಮತ್ತು ಮೈಸೂರಿನಲ್ಲಿ ಹೆಲಿಟೂರಿಸಂ ಮಾಡಬೇಕಿದೆ. ಇದು ರಾಜ ವಂಶಸ್ಥರ ಜಾಗವಾಗಿದೆ. ಹೀಗಾಗಿ, ಪ್ರಮೋದಾದೇವಿ ಒಡೆಯರ್ ಅನುಮತಿ ಕೇಳಿದ್ದೇವೆ. ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದಿದ್ದಾರೆ.

ನಗರದ ಸಮೀಪದ ಜಾಗದಲ್ಲಿ ಹೆಲಿಟೂರಿಸಂ ಮಾಡಿದ್ದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತೆ. ಬೆಂಗಳೂರು ಪ್ಯಾಲೇಸ್ ಬಳಿ ಮತ್ತು ಮೈಸೂರಿನ ಲಲಿತಮಹಲ್ ಬಳಿ ಹೆಲಿಟೂರಿಸಂ ಮಾಡಿದ್ರೆ ಲಾಭದಾಯಕ. ಈ ಹಿನ್ನಲೆಯಲ್ಲಿ ಅವರ ಒಪ್ಪಿಗೆ ಬೇಕಿದೆ. ಸದ್ಯಕ್ಕೆ ಅವ್ರು ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಈ ಬಗ್ಗೆ ಮಾತುಕತೆ ಮಾಡುತ್ತೇವೆ ಎಂದು ಹೇಳಿದರು.

ರಾಜ ವಂಶಸ್ಥರ ವಿವಾದಿತ ಜಾಗದ ವಿಚಾರ. ನನ್ನ ಬಳಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅದು ಸರ್ಕಾರದ ಮಟ್ಟದಲ್ಲಿ ಆಗಲಿದೆ. ನನ್ನ ಇಲಾಖೆಯ ವ್ಯಾಪ್ತಿಯಲ್ಲಿ ಕೆಲಸಗಳಾಗಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರಮೋದಾದೇವಿಯವರನ್ನ ಭೇಟಿ ಮಾಡಿದ್ದೇನೆ ಎಂದು ವಿವರಿಸಿದರು.

ಮೈಸೂರನ್ನ ಪ್ರವಾಸೋದ್ಯಮ ದೃಷ್ಟಿಯಿಂದ ಮತ್ತಷ್ಟು ಅಭಿವೃದ್ಧಿ ಮಾಡಬೇಕಿದೆ. ಇಲ್ಲಿ ಸಂಜೆಯಾಗುತ್ತಿದ್ದಂತೆ ನಗರ ಸ್ತಬ್ಧವಾಗುತ್ತೆ. ಹಾಗಾಗಿ, ಸಾಂಸ್ಕೃತಿಕ ನಗರದಲ್ಲಿ ಸಂಜೆ ವೇಳೆಯೂ ಕಾರ್ಯಕ್ರಮಗಳಾಗಬೇಕು. ಹೊರಗಿಂದ ಬರುವ ಪ್ರವಾಸಿಗರು ಒಂದೇರಡು ದಿನಗಳ ಕಾಲ ಉಳಿಯುವಂತೆ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.Helitourism-Pramodhadevi-Wonderful-Positive-Response-Minister-Yogeshwarಪ್ರತಿದಿನವೂ ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಸಾಂಸ್ಕೃತಿಕನಗರಿಯನ್ನ ಅಭಿವೃದ್ಧಿ ಪಡಿಸುವ ಚಿಂತನೆ ಇದೆ. ಹಂತ ಹಂತವಾಗಿ ಡೆವಲಪ್ ಮಾಡುತ್ತೇವೆ. ಬರೀ ದಸರಾ ಸಂದರ್ಭದಲ್ಲಿ ಮಾತ್ರವಲ್ಲದೆ ಉಳಿದ ಸಂದರ್ಭದಲ್ಲೂ ಮೈಸೂರು ನೋಡುಗರ ಕಣ್ಮನ ಸೇಳೆಯುವಂತೆ ಮಾಡೋಣ ಎಂದು ತಿಳಿಸಿದರು.

key words : Helitourism-Pramodhadevi-Wonderful-Positive-Response-
Minister-Yogeshwar