ಮೈಸೂರು,ಮಾರ್ಚ್,8,2021(www.justkannada.in): ಕೊರೋನಾ ಸಂಕಷ್ಟದ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಇಂದು 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು ಈ ಬಜೆಟ್ ಬಗ್ಗೆ ಹಲವು ನಾಯಕರು ಹಾಗೂ ರೈತಮುಖಂಡರು ಟೀಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಮೈಸೂರನ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡದ ಸಿಎಂ ಬಿಎಸ್ ವೈ ವಿರುದ್ಧ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಮೈಸೂರಿಗೆ ಶೂನ್ಯ ಕೊಡುಗೆ. ಮೈಸೂರು ಅಭಿವೃದ್ಧಿ ಈ ಬಾರಿ ಬಜೆಟ್ ನಲ್ಲಿ ಅನುದಾನ ನೀಡಿಲ್ಲ. ಮಂಡಕಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಗೂ ಅನುದಾನ ನೀಡಲಾಗಿಲ್ಲ. ಜತೆಗೆ ಪ್ರತ್ಯೇಕ ಜಲಮಂಡಳಿ ನಿರ್ಮಾಣದ ಬಗ್ಗೆಯೂ ಉಲ್ಲಖವಿಲ್ಲ. ಪಾರಂಪರಿಕ ನಗರ ಘೋಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ದಸರಾ ಪ್ರಾಧಿಕಾರ ರಚನೆ, ಮೈಸೂರು ನಗರ ವ್ಯಾಪ್ತಿ ವಿಸ್ತರಣೆ ಘೋಷಣೆ ನಿರೀಕ್ಷೆ ಹೊಂದಿದ್ದ ಮೈಸೂರಿಗರಿಗೆ ನಿರಾಸೆ ಉಂಟಾಗಿದೆ. ಈ ಮೂಲಕ ಮೈಸೂರು ಭಾಗವನ್ನು ನಿರ್ಲಕ್ಷಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಇದು ರೈತರನ್ನು ಮರೆತ ಬಿಎಸಸ್ ವೈ ಬಜೆಟ್- ರೈತ ಮುಖಂಡ ಬಡಗಲಪುರ ನಾಗೇಂದ್ರ ವ್ಯಂಗ್ಯ..
ರಾಜ್ಯ ಬಜೆಟ್ ಕುರಿತು ವ್ಯಂಗ್ಯವಾಡಿರುವ ರೈತ ಮುಖಂಡ ಬಡಗಲಪುರ ನಾಗೇಂದ್ರ, ಇದು ರೈತರನ್ನು ಮರೆತ ಬಿಎಸಸ್ ವೈ ಬಜೆಟ್. ಒಬ್ಬ ಅಕೌಂಟೆಂಟ್ ರೀತಿಯಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ. ಈ ಬಜೆಟ್ ನಿಂದ ಕೃಷಿ ಕ್ಷೇತ್ರಕ್ಕೆ ಯಾವುದೇ ಲಾಭ ಇಲ್ಲ. ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರಕ್ಕೆ ಪುನಶ್ಚೇತನ ಮಾಡುವ ಉದ್ದೇಶ ಇಲ್ಲ.ನೀರಾವರಿಗೆ ಅತ್ಯಂತ ಕಡಿಮೆ ಪ್ರಮಾಣದ ಅನುದಾನ ಮೀಸಲಿದ್ದಾರೆ. ಎತ್ತಿನಹೊಳೆ ಯೋಜನೆಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕೃಷಿಗೆ ಮೀಸಲಿಟ್ಟುರುವ ಅನುದಾನದ ಗಾತ್ರ ಕಡಿಮೆಯಾಗಿದೆ. ಈ ಬಜೆಟ್ ನಿಂದ ಗ್ರಾಮೀಣ ಜನರಿಗೆ ಯಾವುದೇ ಉಪಯೋಗವಿಲ್ಲ. ಸಾವಯವ ಕೃಷಿಗೆ ಮೀಸಲಿಟ್ಟುರುವ ಹಣ ರೈತರ ಕೈಸೇರಲ್ಲ. ಸಂಘ ಪರಿವಾರದ ಕಾರ್ಯಕರ್ತರಿಗೆ ಗೌರವಧನ ನೀಡಲು ಸಾವಯವ ಕ್ಷೇತ್ರದ ಹೆಸರಿನಲ್ಲಿ ಹಣ ಮೀಸಲಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ನಗರ ಕೇಂದ್ರಿಕೃತ ಬಜೆಟ್, ಜಾತಿ ಸಮುದಾಯಗಳ ಓಲೈಕೆ: ರೈತರ ನಿರ್ಲಕ್ಷ್ಯ- ಕುರುಬೂರು ಶಾಂತಕುಮಾರ್
ಜಾತಿ ಸಮುದಾಯಗಳ ಓಲೈಕೆಗೆ ಹಣ ಮೀಸಲಿಡುವ ಮೂಲಕ , ಕೃಷಿಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಯಾವುದೇ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳದೆ ನಿರ್ಲಕ್ಷಿಸಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಟೀಕಿಸಿದ್ದಾರೆ.
ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಕುರುಬೂರು ಶಾಂತಕುಮಾರ್, ಹೊಸ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖರೀದಿಗೆ ಆವರ್ತ ನಿಧಿ ನಿಗದಿಗೊಳಿಸಿದೆ, ಕೃಷಿ ಉತ್ಪನ್ನಗಳ ಅಡಮಾನ ಸಾಲಕ್ಕೆ ಕೇವಲ ಐದು ಕೋಟಿ ಮೀಸಲಾಗಿರಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ, ರಸಗೊಬ್ಬರ ಬೆಲೆ ಏರಿಕೆ ಡೀಸೆಲ್ ಬೆಲೆ ಯಾರಿಗೆ ಕೃಷಿ ಯಂತ್ರೋಪಕರಣಗಳ ಬಳಕೆ ಸಂಕಷ್ಟ ಅನುಭವಿಸಬೇಕಾಗಿದೆ ಇದಕ್ಕೆ ಯಾವುದೇ ಸ್ಪಂದನ ನೀಡದೆ ಇರುವುದು, ಮುಂದಿನ ದಿನಗಳಲ್ಲಿ ಕೃಷಿ ಹಿನ್ನಡೆಗೆ ಕಾರಣವಾಗುತ್ತದೆ, ಮೇಕೆದಾಟು ಯೋಜನೆಗೆ 9000 ಕೋಟಿ ಮೀಸಲಿರಿಸುವದನ್ನ ಭದ್ರಾ ಮೇಲ್ದಂಡೆ ಯೋಜನೆಗೆ ಇಪ್ಪತ್ತೊಂದು ಸಾವಿರ ಕೋಟಿ ಮೀಸಲಿರಿಸುವುದನ್ನು ಕಾರ್ಯಗತಗೊಳಿಸಬೇಕು.
ಮಹಿಳಾ ದಿನದ ಪ್ರಯುಕ್ತ ಮಹಿಳೆಯರ ಅಭಿವೃದ್ಧಿಗೆ ಬೇಕಾದ ಹಲವು ಯೋಜನೆಗಳು ಉತ್ತಮವಾಗಿವೆ, ಕಬ್ಬು ಬೆಳೆಗಾರರಿಗೆ ಬೇಕಾದ ಯಾವುದೇ ಯೋಜನೆಗಳು ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾಗತಾರ್ಹ ಅಲ್ಲದಿದ್ದರೂ ಸಮಾಧಾನಕರ ಬಜೆಟ್..!
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಸ್ವಾಗತಾರ್ಹ ಅಲ್ಲದಿದ್ದರೂ ಸಮಾಧಾನಕರ ಬಜೆಟ್ ಆಗಿದೆ. ಕೈಗಾರಿಕಾ ಕ್ಷೇತ್ರಕ್ಕೆ ರಾಜ್ಯ ಬಜೆಟ್ ಅಲ್ಪ ಪ್ರಮಾಣದ ಸಮಾಧಾನ ನೀಡಿದೆ.ಮಹಿಳಾ ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ನೀಡಿರುವುದು ಸ್ವಾಗತಾರ್ಹ. ವಲಸೆ ಕಾರ್ಮಿಕರಿಗೆ ವಸತಿ ಸೌಲಭ್ಯ ಯೋಜನೆ ಅನುಕೂಲಕರ. ಪರಿಶಿಷ್ಟ ವರ್ಗ ಮತ್ತು ಪಂಗಡಕ್ಕೆ ಉತ್ತೇಜನ ಸೇವಾವಲಯದಲ್ಲಿ ರಿಯಾಯಿತಿ. ಆಸ್ಪತ್ರೆ, ವಾಣಿಜ್ಯ ಮಳಿಗೆಗಳಿಗೆ ಸಾಲ ಸೌಲಭ್ಯ ನೀಡಿರುವುದು ಉತ್ತಮ. ಕೈಗಾರಿಕಾ ಪಟ್ಟಣ ಪ್ರಾಧಿಕಾರ ಸ್ಥಾಪನೆ ಕೈಬಿಟ್ಟುರುವುದು ದುರಾದೃಷ್ಠಕರ. ಸಣ್ಣ ಕೈಗಾರಿಕೋದ್ಯಮಿಗಳಿಗೆ ವಿದ್ಯುತ್ ವಿನಾಯಿತಿಗೆ ನಿರಾಕರಣೆ ಮಾಡಲಾಗಿದೆ ಎಂದರು.
Key words: Criticis -congress leaders –farmer leaders- about – state budget.