ಬೆಂಗಳೂರು,ಮಾರ್ಚ್,9,2021(www.justkannada.in): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯಾದ ಬೆನ್ನಲ್ಲೆ 6 ಮಂದಿ ಸಚಿವರು ತಮ್ಮ ವಿರುದ್ಧದ ಆಕ್ಷೇಪಾರ್ಹ ಸುದ್ಧಿ ಪ್ರಸಾರಕ್ಕೆ ತಡೆ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆರು ಮಂದಿ ಸಚಿವರು ಕೋರ್ಟ್ ಗೆ ಹೋಗಿದ್ದಾರೆ. ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಕೊರ್ಟ್ ಗೆ ಹೋದ್ರು. ನಿಮ್ಮ ಮುಖಕ್ಕೆ ನೀವೆ ಮಸಿ ಬಳಿದುಕೊಳ್ಳುತ್ತಿದ್ದೀರಿ. ನ್ಯಾಯಕ್ಕಾಗಿ ಹೋದವರು ಅಮಾಯಕರು. ಆದರೆ ಮೇಧಾವಿಗಳು. ಇಂತಹ ಸರ್ಕಾರ ತರಲು ಹೋಗಬೇಕಿತ್ತಾ. ಇಲ್ಲೇ ಆರಮವಾಗಿ ಇರಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ಇನ್ನು ರಮೇಶ್ ಜಾರಕಿಹೊಳಿ ಪ್ರಕರಣ ದೊಡ್ಡ ಪ್ರಚಾರ ಪಡೆದಿದೆ. ನಾನು ನನ್ನ ಕುಟುಂಬವದವರು ಇಂತಹ ಕೆಲಸ ಮಾಡಿಲ್ಲ. ಪಾಪ ರಮೇಶ್ ಜಾರಕಿಹೊಳಿ ಅಮಾಯಕರು. ಬಾಂಬೆಗೆ ಶಾಸಕರನ್ನು ಕರೆದುಕೊಂಡು ಹೋದ್ರು. ಯಾರ್ ಯಾರ್ ಬಗ್ಗೆ ಏನೇನು ಷಡ್ಯಂತ್ರ ಮಾಡಿದ್ದಾರೋ ನನಗೆ ಗೊತ್ತಿಲ್ಲ. 2 + 3 + 4 ತಂಡದ ಬಗ್ಗೆ ಜಾರಕಿಹೊಳಿಯೇ ಹೇಳಬೇಕು ಎಂದು ಹೆಚ್.ಡಿಕೆ ತಿಳಿಸಿದರು.
6 ಸಚಿವರು ಕೋರ್ಟ್ ಗೆ ಹೋಗಿದ್ದಾರೆ. ಇವರಿಗೆ ಈ ಐಡಿಯಾ ಕೊಟ್ಟವರು ಯಾರು.? ಜನ ಇವರ ಬಗ್ಗೆ ಏನಂದುಕೊಳ್ಳಬೇಕು. ಇಂಥದನ್ನು ನೋಡಲು ನನ್ನ ಸರ್ಕಾರ ಬೀಳಿಸಬೇಕಿತ್ತಾ.? ಎಂದು ಹೆಚ್.ಡಿಕೆ ಪ್ರಶ್ನಿಸಿದರು.
Key words: ramesh jarkiholi-CD-case- Former CM –H.D kumaraswamy- criticism.