ಮೈಸೂರು,ಮಾರ್ಚ್,10,2021(www.justkannada.in): ನಾಳೆ ಮಹಾಶಿವರಾತ್ರಿ ಹಬ್ಬ ಹಿನ್ನಲೆ, ಮೈಸೂರು ಅರಮನೆಯ ತ್ರೀನೇಶ್ವರ ದೇವಾಲಯದ ಶಿವಲಿಂಗಕ್ಕೆ ಧಾರಣಿ ಆಗಲಿರುವ ಚಿನ್ನದ ಕೊಳಗವನ್ನ ದೇವಾಲಯದ ಅರ್ಚಕರಿಗೆ ಹಸ್ತಾಂತರಿಸಲಾಯಿತು.
ಬರೊಬ್ಬರಿ 11 ಕೆಜಿಯುಳ್ಳ ಅಪರಂಜಿ ಚಿನ್ನದಿಂದ ಮಾಡಿರುವ ಕೊಳಗ ಇದಾಗಿದ್ದು, ರಾಜವಶಂಸ್ಥ ಜಯಚಾಮರಾಜೇಂದ್ರ ಒಡೆಯರ್ ಪುತ್ರ ಸಂತಾನ ಸಂದರ್ಭದಲ್ಲಿ ಕೊಡುಗೆಯಾಗಿ ನೀಡಲಾಗಿತ್ತು. ಈ ಕೊಳಗ ಶಿವರಾತ್ರಿ ದಿವಸ ಮಾತ್ರ ಶ್ರೀ ತ್ರೀನೇಶ್ವರ ದೇವಾಲಯದ ಶಿವಲಿಂಗಕ್ಕೆ ಧಾರಣಿ ಆಗಲಿದೆ.
ಹೀಗಾಗಿ ಇಂದು ಮುಜರಾಯಿ ಇಲಾಖೆಯಿಂದ ಬಿಗಿ ಪೋಲಿಸ್ ಭದ್ರತೆಯೊಂದಿಗೆ ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ಚಿನ್ನದ ಕೊಳಗ ತಂದು ದೇವಾಲಯದ ಅರ್ಚಕರಿಗೆ ಹಸ್ತಾಂತರಿಸಲಾಯಿತು.
ನಾಳೆ ಮುಂಜಾನೆ ಶಿವಲಿಂಗಕ್ಕೆ ಕೊಳಗ ಧಾರಣೆಯಾಗಲಿದ್ದು, ನಾಳೆ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ. ಇನ್ನು ಶಿವರಾತ್ರಿ ಹಬ್ಬ ಹಿನ್ನೆಲೆ ತ್ರೀನೇಶ್ವರ ದೇವಾಲಯದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
Key words: tomorrow- Mahashivratri-festival-gold –kolaga- Trineswara temple.