ಬೆಂಗಳೂರು,ಮಾರ್ಚ್,12,2021(www.justkannada.in): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರನ್ನೊಳಗೊಂಡ ತಂಡ ರಚನೆ ಮಾಡಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಈ ಕುರಿತು ಇಂದು ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತವದಲ್ಲಿ 7 ಜನರ ತಂಡವನ್ನ ರಚಿಸಿದ್ದೇವೆ. ಡಿಸಿಪಿ ಅನುಚೇತ್ , ಡಿಸಿಪಿ ರವಿಕುಮಾರ್, ಎಸಿಪಿ ಧರ್ಮೇಂದ್ರ, ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು, ಇನ್ಸ್ ಪೆಕ್ಟರ್ ಮಾರುತಿ ಸೇರಿ 7 ಜನರ ತಂಡ ರಚಿಸಲಾಗಿದೆ ಎಂದರು.
ಕಾನೂನು ಚೌಕಟ್ಟಿನಲ್ಲಿ ಎಸ್ ಐಟಿ ತನಿಖೆ ನಡೆಯುತ್ತದೆ. ಯಾವ ರೀತಿ ತನಿಖೆ ಎಂದು ಸದ್ಯಕ್ಕೆ ಚರ್ಚೆ ಮಾಡಿಲ್ಲ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
Key words: Rasalee –CD- release- case-SIT -investigation -legal -Police Commissioner- Kamal Pant