ಮೈಸೂರು,ಮಾರ್ಚ್,13,2021(www.justkannada.in): ಕೆ ಆರ್ ಎಸ್ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಯೋಜನೆಗೆ ಮತ್ತೆ ಜೀವ ತುಂಬಲು ಹೊರಟ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಗೆ ಆರಂಭದಲ್ಲೇ ವಿರೋಧ ವ್ಯಕ್ತವಾಗಿದೆ.
ಹೌದು ಕೆ ಆರ್ ಎಸ್ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣಕ್ಕೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಎಂ ಲಕ್ಷ್ಮಣ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಯಾವುದೇ ಕಾರಣಕ್ಕೆ ಕೆ ಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ಬೇಡ: ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಇದು ಕೇವಲ ಖಾಸಗಿಯವರಿಗೆ ಲಾಭದಾಯಕ ಉದ್ಯಮವಾಗಲಿದೆ ಎಂದು ತಿಳಿಸಿದ್ದಾರೆ.
ಡಿಸ್ನಿಲ್ಯಾಂಡ್ ಸುಮಾರು 2000 ಕೋಟಿ ಪ್ರಾಜೆಕ್ಟ್ ಆಗಿದೆ. ಇದಕ್ಕಾಗಿ 5 ಕಂಪನಿ ಗುರುತಿಸಲಾಗಿದೆ. ಸರ್ಕಾರದ 331 ಎಕರೆ 23 ಗುಂಟೆ ಹಾಗೂ ರೈತರಿಂದ 400 ಎಕರೆ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಜಯಪುರದ ಸಿನ್ಸಿಯರ್ ಆರ್ಕಿಟೆಕ್ಟ್ ಈ ಬಗ್ಗೆ ಯೋಜನೆ ಸಿದ್ದಪಡಿಸಿದೆ. ಸರ್ಕಾರ ಪ್ರವಾಸೋದ್ಯಮದ ದೃಷ್ಟಿ ಉದ್ಯೋಗ ಸೃಷ್ಟಿಯ ಕಾರಣ ನೀಡಿದೆ. ಕೆ ಆರ್ ಎಸ್ ಡ್ಯಾಂಗೆ 90 ವರ್ಷ ಆಗಿದೆ. ಎಷ್ಟು ವರ್ಷ ಸ್ಥಿತವಾಗಿರುತ್ತೇ ಹೇಳಲು ಸಾಧ್ಯವಿಲ್ಲ ಎಂದು ಎಂ. ಲಕ್ಷ್ಮಣ್ ತಿಳಿಸಿದ್ದಾರೆ.
ಕೆ ಆರ್ ಎಸ್ 3 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುತ್ತಿದೆ. ಬೆಂಗಳೂರಿನ ಒಂದುವರೆ ಕೋಟಿ ಜನರಿಗೆ ನೀರು, ಮಂಡ್ಯ ಚಾಮರಾಜನಗರ ಮೈಸೂರು ರಾಮನಗರ ಬೆಂಗಳೂರು ತಮಿಳುನಾಡು ಕಾವೇರಿ ನೀರಿಗೆ ಅವಲಂಬಿತವಾಗಿದೆ. ಈ ಹಿಂದೆ ಕೆ ಆರ್ ಎಸ್ 3.75 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಅರ್ಧ ಸುಣ್ಣ ಹಾಗೂ ಅರ್ಧ ಮಣ್ಣಿನಿಂದ ನಿರ್ಮಾಣವಾಗಿದೆ. ಕಟ್ಟಬಾರದ ಜಾಗದಲ್ಲಿ ಡ್ಯಾಂ ಕಟ್ಟಲಾಗಿದೆ. ಸಣ್ಣ ಪ್ರಮಾಣದ ಅಲುಗಾಡಿದರೂ ಡ್ಯಾಂಗೆ ಅಪಾಯ. ಕೆ ಆರ್ ಎಸ್ಗೆ ಜನರು ಬರುತ್ತಿರುವುದೇ ಅಪಾಯವಾಗಿದೆ. ಈ ಬಗ್ಗೆ ಕೇಂದ್ರಕ್ಕೆ ವರದಿ ನೀಡಲಾಗಿದೆ. ಬರುತ್ತಿರುವ ಜನರನ್ನು ಕಡಿಮೆ ಮಾಡಲು ತಿಳಿಸಲಾಗಿದೆ. ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯಿಂದ ವರದಿ ನೀಡಿದೆ ಎಂದು ಇಂಜಿನಿಯರ್ ಎಂ. ಲಕ್ಷ್ಮಣ್ ಮಾಹಿತಿ ನೀಡಿದರು.
ಕಾವೇರಿ ಮಾತೆ ದೇವರು ಎಂದು ಪೂಜೆ ಮಾಡಲಾಗುತ್ತದೆ. ಆದರೆ ಆ ಜಾಗದಲ್ಲಿ ಹೋಟೆಲ್ ನೈಟ್ ಲೈಫ್. 24 ಗಂಟೆ ಮದ್ಯ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅಮೆರಿಕಾ ಮಾದರಿಯಲ್ಲಿ ಪುಡ್ ಸ್ಟ್ರೀಟ್ ಮಾಡಲಾಗುತ್ತದೆ. ಕೆ ಆರ್ ಎಸ್ ಅನ್ನು ಜಿ ಆರ್ ಎಸ್ ಫ್ಯಾಂಟಸಿ ಮಾಡುತ್ತಿದ್ದಾರೆ ಎಂದು ಎಂ ಲಕ್ಷ್ಮಣ ಹೇಳಿದರು.
ಯಾವುದೇ ಕಾರಣಕ್ಕೆ ಕೆ ಆರ್ ಎಸ್ನಲ್ಲಿ ಡಿಸ್ನಿಲ್ಯಾಂಡ್ ಬೇಡ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಇದು ಕೇವಲ ಖಾಸಗಿಯವರಿಗೆ ಲಾಭದಾಯಕ ಉದ್ಯಮವಾಗಲಿದೆ. ಇದರ ಎಂಟ್ರಿ ಶುಲ್ಕ ಸಹ ದುಬಾರಿಯಾಗಿರಲಿದೆ. ಮಿನಿಮಮ್ ಒಬ್ಬರಿಗೆ 5 ಸಾವಿರ ರೂಪಾಯಿ ಆಗಲಿದೆ. ಸಾಮಾನ್ಯ ಜನರು ಬಡ ಜನರು ಡಿಸ್ನಿಲ್ಯಾಂಡ್ ಗೆ ಹೋಗಲು ಸಾಧ್ಯವಿಲ್ಲ. ಒಳಗಡೆಯೇ ಹೋಟೆಲ್ ಲಾಡ್ಜ್ ಇರುವುದರಿಂದ ಸ್ಥಳೀಯರಿಗೆ ಯಾವುದೇ ಲಾಭ ಇಲ್ಲ ಎಂದರು.
ಸುಪ್ರೀಂಕೋರ್ಟ್ ಮೊರೆ ಹೋಗಲು ನಾವು ಸಿದ್ದರಿದ್ದೇವೆ….
ಪ್ರವಾಸೋದ್ಯಮ ಅಭಿವೃದ್ದಿಗೆ ನಮ್ಮ ಅಭ್ಯಂತರ ಇಲ್ಲ. ಕೆ ಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ಗೆ ನಮ್ಮ ವಿರೋಧ ಇದೆ. ಈ ಬಗ್ಗೆ ನಾವು ಸುಪ್ರೀಂಕೋರ್ಟ್ ಮೊರೆ ಹೋಗಲು ನಾವು ಸಿದ್ದರಿದ್ದೇವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ದೂರು ನೀಡಲಾಗುವುದು. ಕೆ ಆರ್ ಎಸ್ ಬಿಟ್ಟು ಎಲ್ಲಿ ಬೇಕಾದರೂ ಮಾಡಿ ನಮ್ಮ ವಿರೋಧ ಇಲ್ಲ ಎಂದು ಎಂ. ಲಕ್ಷ್ಮಣ್ ತಿಳಿಸಿದರು.
Key words: mysore-No -Disneyland – KRS – Engineer- M Laxmana- Opposition.