2 ಕಡೆ ವಿಧಾನಮಂಡಲ ಅಧಿವೇಶನ, ಸ್ಪೀಕರ್ ಜೊತೆಗೆ ಚರ್ಚೆ : ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು,ಮಾರ್ಚ್,13,2021(www.justkannada.in) : ಎರಡು ಕಡೆ ವಿಧಾನಮಂಡಲ ಅಧಿವೇಶನ ನಡೆಸುತ್ತಿರುವ ನಿಟ್ಟಿನಲ್ಲಿ ಈ ಕುರಿತು ಸ್ಪೀಕರ್ ಅವರೊಂದಿಗೆ ಚರ್ಚಿಸುವುದಾಗಿ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

jk

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಹಾಗೂ ಅಧಿಕಾರಿಗಳೊಂದಿಗೆ ತೆರಳಿ ಮಾಹಿತಿ ಪಡೆಯುವ ಚಿಂತನೆ ತಮ್ಮದಾಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಒಲವು ತಮ್ಮದಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದಿದ್ದಾರೆ.

ಬೆಳಗಾವಿಗೆ ಕಚೇರಿಗಳ ಸ್ಥಳಾಂತರ ಅವಶ್ಯವಾಗಿದೆ. ಆದರೆ, ಸುವರ್ಣಸೌಧದಲ್ಲಿ ಕಚೇರಿಗಳಿಗೆ ಸ್ಥಳವಕಾಶ ಇಲ್ಲವಾಗಿದೆ. ವಿಧಾನಪರಿಷತ್ತು ಸದನವನ್ನು ಕಾಲಮಿತಿಗೆ ಅನುಗುಣವಾಗಿ, ಆಯಾ ದಿನದ ಅಜೆಂಡಾ ಮುಗಿಸಲು ಒತ್ತು ನೀಡಲಾಗಿದೆ ಎಂದು ಹೇಳಿದರು. 2 sides-legislative-assembly-session-Speaker-addition-Discussion-legislative-council-chairman-Basavaraja horatti 

ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕಾಗಿದೆ

ಪ್ರಶ್ನೋತ್ತರ ವೇಳೆ ಇತರೆ ಸದಸ್ಯರಿಗೆ ಉಪ ಪ್ರಶ್ನೆ ಕೇಳಲು ಅವಕಾಶ ನೀಡುತ್ತಿಲ್ಲ. ಸದನದ ಎಲ್ಲಾ ಸದಸ್ಯರು ಸಹಕಾರ ನೀಡುತ್ತಿದ್ದರಿಂದ ಇದು ಸಾಧ್ಯವಾಗುತ್ತಿದೆ ಎಂದರು. ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕಾಗಿದೆ. ಈ ಬಗ್ಗೆ ಸರಕಾರ ತೀರ್ಮಾನ ತೆಗೆದುಕೊಳ್ಳಬೇಕೆಂದರು.

key words : 2 sides-legislative-assembly-session-Speaker-addition-Discussion-legislative-council-chairman-Basavaraja horatti