ಬೆಂಗಳೂರು,ಮಾರ್ಚ್,15,2021(www.justkannada.in): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದ ಸಮುದಾಯದ ಮುಖಂಡರು ಮತ್ತು ಸ್ವಾಮೀಜಿಗಳು ಧರಣಿಯನ್ನ ತಾತ್ಕಾಲಿಕವಾಗಿ ಅಂತ್ಯಗೊಳಿಸಿದ್ದಾರೆ.
ಮೀಸಲಾತಿ ಬಗ್ಗೆ ಆರು ತಿಂಗಳಲ್ಲಿ ವರದಿ ಪಡೆಯುವ ಬಗ್ಗೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನ ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಜಯಮೃತ್ಯುಂಜಯ ಸ್ವಾಮೀಜಿಗಳು, ಸಿಎಂ ಭರವಸೆ ಹಿನ್ನೆಲೆಯಲ್ಲಿ 6 ತಿಂಗಳವರೆಗೆ ಧರಣಿಯನ್ನ ಅಂತ್ಯಗೊಳಿಸಿದ್ದೇವೆ. ಮೀಸಲಾತಿ ಹೋರಾಟಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆನ್ನೆಲುಬಾಗಿದ್ದರು. ಅವರ ಸಲಹೆ ಮೇರೆಗೆ ಸಮುದಾಯದ ಎಲ್ಲರ ಒಪ್ಪಿಗೆ ಮೇರೆಗೆ ಧರಣಿ ಅಂತ್ಯಗೊಳಿಸಿದ್ದೇವೆ. 6 ತಿಂಗಳೊಳಗೆ ಮೀಸಲಾತಿ ಬಗ್ಗೆ ನಿರ್ಧಾರವಾಗಬೇಕು. ಇನ್ನು ನಾವು ತಪ್ಪು ಮಾತನಾಡಿದ್ರೆ ಅದನ್ನ ಹೊಟ್ಟೆಗೆ ಹಾಕಿಕೊಳ್ಳಿ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಮಗ್ರ ಮೀಸಲಾತಿ ನೀಡುವಂತೆ ಸಿಎಂ ಗೆ ಮನವಿ ಮಾಡಿದ್ದೆವು. ಎಲ್ಲಾ ಉಪಜಾತಿಗಳನ್ನೂ ಮೀಸಲಾತಿಗೆ ಸೇರಿಸುವಂತೆ ಮನವಿ ಮಾಡಿದ್ದೇವೆ. ಈಗ ಆರು ತಿಂಗಳ ಒಳಗಾಗಿ ವರದಿ ಸಿದ್ದಪಡಿಸುವಂತೆ ಸೂಚಿಸಲಾಗಿದೆ. ಆರು ತಿಂಗಳಲ್ಲಿ ಸ್ಪಷ್ಟನೆ ದೊರೆಯಲಿದೆ. ಹೀಗಾಗಿ ಸಿಎಂಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದರು.
ENGLISH SUMARRY….
Protest demanding inclusion of Panchamasalis under 2A reservation ended temporarily
Bengaluru, Mar.15, 2021 (www.justkannada.in): Leaders of the Panchamasali community along with Swamijis of the community who were on a protest from the last few days demanding inclusion of their community under 2A for reservation have ended the protest temporarily.
Minister C.C. Patil, MLA Basanagouda Patil Yatnal appealed to the Swamiji’s to withdraw the protest following the assurance from Chief Minister B.S. Yedyurappa’s. According to Mrutyunjayaswamiji the protest demonstration has been called off temporarily following Yedyurappa’s assurance of getting the report on reservations in the next six months.
“We have decided to withdraw the protest till the next six months. MLA Basanagouda Patil Yatnal was standing behind us throughout our efforts. We have ended the protest as per his advice. The State Government should decide about the reservation within the next six months.
Meanwhile, MLA Basavanagouda Patil Yatnal said, ” We had appealed the Chief Minister to provide comprehensive reservation for all the sub castes too. However, he has given instructions to prepare a report within the next six months and we are sure to get a clear picture within that time. Hence, I wish to appreciate the Chief Minister.”
Keywords: Basvanagouda Patil Yantal/ Chief Minister B.S. Yedyurappa/ Panchamasali/ reservation/ 2A
Key words: Request – reservation -2A-panchamasali- End – temporarily –fight