ಮೈಸೂರು,ಮಾರ್ಚ್,17,2021(www.justkannada.in): ನಂಜನಗೂಡು ರಥೋತ್ಸವದ ಮೇಲೆ ಕೊರೋನಾ ಕರಿನೆರಳು ಬಿದ್ದಿದ್ದು ನಂಜನಗೂಡಿನ ಪಂಚಮಹಾರಥೋತ್ಸವವನ್ನ ರದ್ಧುಗೊಳಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.
ಕೊರೊನಾ ಎರಡನೇ ಅಲೆ ಭೀತಿ ಹಿನ್ನಲೆ. ಪ್ರಸಿದ್ಧ ನಂಜನಗೂಡಿನ ಪಂಚಮಹಾರಥೋತ್ಸವ ರದ್ದುಗೊಳಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ಸಾಂಪ್ರದಾಯಿಕವಾಗಿ ಚಿಕ್ಕ ತೇರು ನಡೆಸಲು ಅನುಮತಿ ನೀಡಲಾಗಿದೆ ಷರತ್ತಿಗೊಳಪಡಿಸಿ ಸಾಂಕೇತಿಕ ರಥೋತ್ಸವಕ್ಕೆ ಜಿಲ್ಲಾಡಳಿತ ಸಮ್ಮತಿ ನೀಡಿದೆ.
ಈ ವೇಳೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಶಿಷ್ಟಾಚಾರದ ಪ್ರಕಾರ ಗಣ್ಯರು ಅಧಿಕಾರಿಗಳು, ಸ್ಥಳಿಯರಿಗೆ ಮಾತ್ರ ಉಪಸ್ಥಿತಿಗೆ ಅವಕಾಶ ನೀಡಲಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆ ಹಾಗೂ ಹೊರ ತಾಲ್ಲೂಕಿನ ಭಕ್ತಾದಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮಾ.19ರಿಂದ 30ರ ವರೆಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
Key words: famous- Nanjangadu –ratostava-festival – canceled.