“ಜಯಲಕ್ಷ್ಮೀ ವಿಲಾಸ ವಸ್ತು ಸಂಗ್ರಹಾಲಯದಲ್ಲಿ ಡಿವಿಜಿ, ಬಿಜಿಎಲ್ ಸ್ವಾಮಿ ಗ್ಯಾಲರಿ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಲೋಕಾರ್ಪಣೆ

ಮೈಸೂರು,ಮಾರ್ಚ್,17,2021(www.justkannada.in) : ಹಲವು ವಿಶೇಷಗಳಿಂದ ಕೂಡಿರುವ ಮಾನಸ ಗಂಗೋತ್ರಿ ಜಯಲಕ್ಷ್ಮೀ ವಿಲಾಸ ವಸ್ತು ಸಂಗ್ರಹಾಲಯಕ್ಕೆ ಮತ್ತೊಂದು ವಿಶೇಷ ಸೇರ್ಪಡೆಯಾಗಿದೆ. ಸಾಹಿತಿಗಳು ಬಳಸಿದ ವಸ್ತುಗಳು, ಅವರ ಕೈ ಬರಹ ಪ್ರತಿಗಳು, ಸಾಹಿತ್ಯ, ಅವರಿಗೆ ಬಂದ ಪ್ರಶಸ್ತಿ ಇತ್ಯಾದಿಗಳನ್ನು ಜಯಲಕ್ಷ್ಮೀ ವಿಲಾಸದಲ್ಲಿ ರೈಟರ್ಸ್‌ ಗ್ಯಾಲರಿಯಲ್ಲಿ ಕಾಣಬಹುದಾಗಿದೆ.

Jayalakshmi-Vilas-Museum-DVG, BGL Swamy Gallery-Chancellor-Prof.G.Hemant Kumar 

 

ಡಿವಿಜಿ ಅವರ ಜನ್ಮದಿನವಾದ ಇಂದು ಹಿರಿಯ ಸಾಹಿತಿ ಡಾ.ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿವಿಜಿ) ಮತ್ತು ವಿಜ್ಞಾನಿ, ಸಾಹಿತ್ಯ ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ (ಬಿಜಿಎಲ್ ಸ್ವಾಮಿ) ಗ್ಯಾಲರಿಯನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಲೊಕಾರ್ಪಣೆಗೊಳಿಸಿದರು.

ಡಿವಿಜಿ ಮತ್ತು ಬಿಜಿಎಲ್ ಗ್ಯಾಲರಿ ಆರಂಭ

 

ಜಯಲಕ್ಷ್ಮೀ ವಿಲಾಸ ವಸ್ತು ಸಂಗ್ರಹಾಲಯದಲ್ಲಿ ಕುವೆಂಪು ಸೇರಿದಂತೆ ಅನೇಕ ಸಾಹಿತಿಗಳ ಗ್ಯಾಲರಿ ಇರುವಂತೆ ಡಿವಿಜಿ ಮತ್ತು ಬಿಜಿಎಲ್ ಗ್ಯಾಲರಿಯನ್ನು ಹೊಸದಾಗಿ ಆರಂಭಿಸಲಾಗಿದೆ.  ಇಬ್ಬರು ಮಹಾನೀಯರನ್ನು ನೆನಪಿಸುವಂತೆ ಅವರು ಬಳಕೆ ಮಾಡಿದ ವಸ್ತುಗಳು, ಪ್ರಶಸ್ತಿ ಸೇರಿದಂತೆ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ.

ಡಿವಿಜಿ ಅವರ ಅಪರೂಪದ ಛಾಯಾಚಿತ್ರಗಳು ಲಭ್ಯ

ಜಯಲಕ್ಷ್ಮೀ ವಿಲಾಸ ವಸ್ತು ಸಂಗ್ರಹಾಲಯಕ್ಕೆ

ಕುವೆಂಪು ಗ್ಯಾಲರಿ ಸಮೀಪದಲ್ಲಿರುವ ಡಿವಿಜಿ ಮತ್ತು ಬಿಜಿಎಲ್ ಸ್ವಾಮಿ ಗ್ಯಾಲರಿಯಲ್ಲಿ ಡಿವಿಜಿ ಅವರ ಅಪರೂಪದ ಛಾಯಾಚಿತ್ರಗಳು, ಡಿವಿಜಿ ಮತ್ತು ಬಿಜಿಎಲ್ ಸ್ವಾಮಿಯವರು ಒಟ್ಟಿಗಿರುವ ಭಾವಚಿತ್ರಗಳು, ಬಿಎಂಶ್ರೀ, ಟಿ.ಎಸ್.ವೆಂಕಣ್ಣ  ಮತ್ತು ಕುವೆಂಪು ಸೇರಿದಂತೆ ಡಿವಿಜಿ  ಕಾಲಘಟ್ಟದಲ್ಲಿ ಸಾಹಿತ್ಯಗಳು ತಮ್ಮ ಸ್ವ ಹಸ್ತ ಅಕ್ಷರದಲ್ಲಿ ನೀಡಿರುವ ಪುಸ್ತಕಗಳು, ಡಿವಿಜಿ ಅವರ ಕೈ ಬರಹ, ಬಿಜಿಎಲ್ ಸ್ವಾಮಿ ಅವರ ಸಮಗ್ರ ವಸ್ತುಗಳನ್ನು ಅವರ ಕುಟುಂಬಸ್ಥರು ಉಚಿತವಾಗಿ ನೀಡಿರುವುದು ವಿಶೇಷ.

ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಫಲಕ ಕಾಣಬಹುದು

ಡಿವಿಜಿ ಅವರು ಬಳಕೆ ಮಾಡುತ್ತಿದ್ದ ವಸ್ತುಗಳು, ಕೈ ಬರಹ, ಲೇಖನ, ನೋಟ್ಸ್, ಅವರು ರಚಿಸಿರುವ ವ್ಯಂಗಚಿತ್ರ, ಕೈ ಕಸೂತಿ ಬ್ಯಾಗ್, ಅವರು ತೆಗೆದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಮೈಸೂರು ಸಸ್ಯಶಾಸ್ತ್ರ  ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಬಿ.ಜಿ.ಎಲ್.ಸ್ವಾಮಿ ಅವರ ಬಾಟ್ನಿ ಟೂರ್ ತೆರಳುತ್ತಿದ್ದ ಸಲಕರಣೆಗಳನ್ನು ಸಹ ಪ್ರದರ್ಶಿಸಲಾಗುತ್ತಿದೆ. ಇಬ್ವರು ಮಹಾನೀಯರ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯ ನೈಜ ಫಲಕವನ್ನೇ ಕುಟುಂಬಸ್ಥರು ನೀಡಿದ್ದಾರೆ. ಅವೆಲ್ಲವನ್ನು ಇಲ್ಲಿ ಪ್ರದರ್ಶಿಸಲಾಗುವುದು. ಈ ಪ್ರದರ್ಶನ ಶಾಶ್ವತವಾಗಿರಲಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಂ.ಜಿ.ಮಂಜುನಾಥ್ ತಿಳಿಸಿದರು.

Jayalakshmi-Vilas-Museum-DVG, BGL Swamy Gallery-Chancellor-Prof.G.Hemant Kumar ಈ ಸಂದರ್ಭ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎನ್.ಎಸ್.ತಾರಾನಾಥ, ಪ್ರೊ.ಸಿ.ಆರ್.ನಾಗೇಂದ್ರ, ಡಿವಿಜಿ ಮತ್ತು ಬಿಜಿಎಲ್ ಸ್ವಾಮಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

key words : Jayalakshmi-Vilas-Museum-DVG, BGL Swamy Gallery-Chancellor-Prof.G.Hemant Kumar