ಮೈಸೂರು,ಜು,3,2019(www.justkannada.in): ನಕಲಿ ಬಿಲ್ ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಜಿಎಸ್ಟಿ ಕಟ್ಟದೆ ತೆರಿಗೆ ವಂಚನೆ ಮಾಡುತ್ತಿದ್ದ ಉದ್ಯಮಿಯನ್ನ ಜಿ.ಎಸ್.ಟಿ ಅಪರಾಧಿ ದಳ ಬಂಧಿಸಿದೆ.
ಬಂದಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಸಿದ ಜಿ.ಎಸ್.ಟಿ ಅಪರಾಧಿ ದಳ ಸಿಬ್ಬಂದಿ. ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪಂಜಾಬ್ ಮೂಲದ ಸ್ಪೆಕ್ಟರ್ ಪೈಪ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಪಂಜಾಬ್ ಮೂಲದ ಅನಿಲ್ ಮೆಹ್ರಾ ಬಂಧಿತ ಆರೋಪಿ. ಈತ ಕಳೆದ ಒಂದೂವರೆ ವರ್ಷದಿಂದ ತಮ್ಮ ಕಾರ್ಖಾನೆಗೆ ಯಾವುದೇ ಕಚ್ಚಾವಸ್ತುಗಳನ್ನು ಖರೀದಿಸದೆ 7.5 ಕೋಟಿ ರೂಪಾಯಿಗಳ ನಕಲಿ ಬಿಲ್ ಸೃಷ್ಟಿ ಮಾಡಿ ಜಿಎಸ್ ಟಿ ಕಟ್ಟದೆ ವಂಚನೆ ಮಾಡಿದ್ದನು ಎನ್ನಲಾಗಿದೆ.
ಈ ಸಂಬಂಧ ಜಿ ಎಸ್ ಟಿ ತನಿಖಾ ದಳ ನಿನ್ನೆ ಅನಿಲ್ ಮೆಹ್ರಾ ಕರೆಸಿ ವಿಚಾರಣೆ ನಡೆಸಿ ಕಚೇರಿಯಲ್ಲೇ ಬಂಧಿಸಿದ್ದಾರೆ. ವಿಚಾರಣೆ ವೇಳೆ ದೇಶದ ಹಲವು ಕಡೆ ಇದೇ ರೀತಿ ವಂಚನೆ ಮಾಡಿದ್ದ ಎಂದು ತಿಳಿದು ಬಂದಿದೆ.
key words: Mysore- Arrest – tax-fraud- businessman.