ನವದೆಹಲಿ,ಮಾರ್ಚ್,18,2021(www.justkannada.in): ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಮಧ್ಯೆ ಪದೇ ಪದೇ ಸಂಘರ್ಷವೆರ್ಪಡುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಸದಸ್ಯ ಜಿ.ಸಿ ಚಂದ್ರಶೇಖರ್ ಗಡಿವಿವಾದ ಕುರಿತು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿರುವ ಜಿ.ಸಿ ಚಂದ್ರಶೇಖರ್, ಯಾವುದೇ ವಿವಾದ ಸಂಘರ್ಷದಿಂದ ಬಗೆ ಹರೆಯೋದಿಲ್ಲ. ಗಾಂಧೀಜಿಯವರ ಅಹಿಂಸಾ ಸಂದೇಶ ಇಡಿ ಪ್ರಪಂಚಕ್ಕೆ ಮಾದರಿಯಾಗಿದೆ. 1956ರ ಕೇಂದ್ರವಾರು ಭಾಷಾವಾರು ವಿಂಗಡಣೆ ಆದಾಗಿನಿಂದಲೂ ಬೆಳಗಾವಿ ಕರ್ನಾಟಕದ ಅಂಗವಾಗಿದೆ. ಮಹಾಜನ ವರದಿಯಲ್ಲೂ ಕರ್ನಾಟಕದ ಅವಿಭಾಜ್ಯ ಅಂಗ ಅಂತ ಹೇಳಲಾಗಿದೆ. ರಾಜಕೀಯ ಲಾಭಕ್ಕಾಗಿ ಗಡಿವಿವಾದ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹಾಗೆಯೇ ನವೆಂಬರ್ 1 ಕರಾಳದಿನವನ್ನಾಗಿ ಆಚರಣೆ ಮಾಡುತ್ತಿದ್ದಾರೆ. ಸಿಮಾ ಸಂಕಲ್ಪ ಎಂಬ ಹೆಸರಿನಲ್ಲಿ ಬೆಳಗಾವಿಯನ್ನ ವಶ ಪಡೆಸಿಕೊಳ್ಳುತ್ತೇವೆ ಅಂತ ಹೇಳುತ್ತಿದ್ದಾರೆ. ಇದರಿಂದ ಸ್ವಾಭಿಮಾನದ ನಮ್ಮ ರಾಜ್ಯ ಹೊತ್ತಿ ಉರಿಯುತ್ತಿದೆ ಎಂದು ಜಿಸಿ ಚಂದ್ರಶೇಖರ್ ರಾಜ್ಯಸಭೆಯಲ್ಲಿ ತಿಳಿಸಿದರು.
Key wiords: GC Chandrasekhar- Rajya Sabha -Maharashtra-Karnataka- border -dispute