ಮೈಸೂರು,ಮಾರ್ಚ್,20,2021(www.justkannada.in) : ಕೃಷಿ ಇಲಾಖೆಯ ವತಿಯಿಂದ ಭದ್ರತಾ ಯೋಜನೆಯಡಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.ನಗರದ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗದಿಂದ ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಜಾಥಾ ಆರಂಭಿಸುವ ಮೂಲಕ ಸಿರಿಧಾನ್ಯಗಳ ಕುರಿತು ಅರಿವು ಮೂಡಿಸಲಾಯಿತು.
ಜಾಥದಲ್ಲಿ ತಿನ್ನಿರಿ ನವಣೆ ಬಾಳಿಗಿಲ್ಲ ಬವಣೆ, ಸಿರಿಧಾನ್ಯ ತಿಂದವರು ಆರೋಗ್ಯದಿಂದ ಸಿರಿವಂತರಾಗುವರು. ಮನುಷ್ಯನಿಗೆ ಆಹಾರ ಮತ್ತು ಆರೋಗ್ಯ ಎರಡು ಮುಖ್ಯ, ಸಿರಿಧಾನ್ಯವನ್ನು ಬಳಸಿ ಆರೋಗ್ಯ ಉತ್ತಮ ರೀತಿಯಲ್ಲಿ ಇರಿಸಿ ಎಂದು ಘೋಷಣೆ ಕೂಗಲಾಯಿತು.
ಸಾರ್ವಜನಿಕರಲ್ಲಿ ಸಿರಿಧಾನ್ಯಗಳ ಬಗ್ಗೆ ಹೆಚ್ಚು ಅರಿವು ಇರುವುದರಿಂದ ಇದನ್ನು ಜಾಸ್ತಿ ಬೆಳೆಯಬೇಕು. ವಿಷ ಮುಕ್ತ ಆಹಾರ ಕಡಿವಾಣ ಹಾಕುವ ಉದ್ದೇಶದಿಂದ ಭಾರತ ಸರ್ಕಾರದ NFSM ಯೋಜನೆ ಅಡಿಯಲ್ಲಿ ಪ್ರಚಾರ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್, ಕೃಷಿ ಇಲಾಕೆಯ ಜಂಟಿ ನಿರ್ದೇಶಕ ಮಹಾಂತೇಶ್ ಇನ್ನಿತರರು ಭಾಗಿಯಾಗಿದ್ದರು.
key words : Department-Agriculture-Siridanya-Awareness-Jatha