ಬೆಂಗಳೂರು,ಮಾರ್ಚ್,25,2021(www.justkannada.in): ದೇಶದಲ್ಲಿ ರೂಪಾಂತರಿ ಕೊರೋನಾ ವೈರಸ್ ಅಬ್ಬರ ಹೆಚ್ಚಳವಾಗುತ್ತಿದ್ದು, ಅದು ವೇಗವಾಗಿ ಹರಡುತ್ತದೆ, ಹೀಗಾಗಿ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಮಾಧ್ಯಮದ ಜತೆ ಇಂದು ಮಾತನಾಡಿದ ಸಚಿವ ಸುಧಾಕರ್, ರಾಜ್ಯದ ಜನರು ಎಚ್ಚರಿಕೆಯಿಂದ ಇರಿ, ನಿರ್ಲಕ್ಷ್ಯ ಮಾಡಬೇಡಿ. ದಿನದಿಂದ ದಿನಕ್ಕೆ ಕೊರೋನಾ ವೈರಸ್ ಹೆಚ್ಚಳವಾಗುತ್ತಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ದೇಶಕ್ಕೆ ರೂಪಾಂತರಿ ಕೊರೋನಾ ವೈರಸ್ ವಕ್ಕರಿಸಿದೆ. 700 ಕ್ಕೂ ಹೆಚ್ಚು ರೂಪಾಂತರಿ ಕೊರೊನಾ ವೈರಸ್ ಗಳು ದಾಖಲಾಗಿವೆ. ರೂಪಾಂತರಿ ಕೊರೊನಾ ವೈರಸ್ ವೇಗವಾಗಿ ಹರಡುತ್ತೆ. ಹೀಗಾಗಿ ಜನರು ಇನ್ನು 2 ತಿಂಗಳ ಕಾಲ ಎಚ್ಚರಿಕೆಯಿಂದ ಇರಬೇಕು.ಕೆಮ್ಮು , ನೆಗಡಿ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೇ ತಕ್ಷಣ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿ ಎಂದು ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ.
ಚಿತ್ರರಂಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಥಿಯೇಟರ್ ಗಳಲ್ಲಿ ಶೇ50ರಷ್ಟು ಭರ್ತಿ ಕುರಿತು ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಚಿತ್ರನಟರು ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಜನರಲ್ಲಿ ಕೊರೋನಾ ತಡೆಗೆ ಜಾಗೃತಿ ಮೂಡಿಸಲು ಮುಂದಾಗಬೇಕು. ತಾವೆ ರಾಯಭಾರಿಗಳಾಗಬೇಕು ಎಂದರು.
ಜನರು ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲಿಸಬೇಕು ಚುನಾವಣೆ ರ್ಯಾಲಿಯಲ್ಲೂ ನಿಯಮ ಪಾಲಿಸಬೇಕು . ಉಪಚುನಾವಣೆಗೆ ಸ್ಪಷ್ಟ ಮಾರ್ಗಸೂಚಿ ಸಂಬಂಧ ಚರ್ಚೆಮಾಡಿ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.
ENGLISH SUMMARY…..
Minister Sudhakar warns people to be careful about mutant coronvirus in the country
Bengaluru, Mar. 25, 2021 (www.justkannada.in): Health and Medical Education Minister Dr. K. Sudhakar has warned the people of the State to be very careful about the mutant Coronavirus, following the steep increase in cases of COVID-19 Pandemic in the country.
Speaking to the press persons today he requested the people not to be negligent about Coronavirus. “Mutant Coronavirus has entered our country. Till now about 700 Coronavirus mutants have been noticed. It spreads at lightning speed. Hence, we should be very careful. If you get any symptoms including coughand cold please consult a doctor immediately,” he requested.
On the occasion, he mentioned that as the film industry is facing a financial crunch, a decision over permitting filling up of only 50% seats in the Cinema halls will be taken soon. “Film actors have a social concern. Hence, I request all of them to voluntarily come forward to create awareness about the COVID-19 Pandemic among the people,” he said.
Keywords: Minister Dr. K. Sudhakar/ mutant coronavirus/ COVID-19 Pandemic/ negligent/ request people to be careful
Key words: corona -virus – country- Keep- people –careful-Minister -Sudhakar.