ಬೈಕ್ ಸವಾರನನ್ನ ಸಾಯಿಸಿದಕ್ಕೆ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತಿಯಾ: ನೀನು ಯಾವ್ ಸೀಮೆ ಕಮಿಷನರಯ್ಯ..?- ಹೆಚ್.ವಿಶ್ವನಾಥ್ ಆಕ್ರೋಶ…

ಮೈಸೂರು,ಮಾರ್ಚ್,25,2021(www.justkannada.in ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮೈಸೂರಿನ ರಿಂಗ್‌ ರಸ್ತೆಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಪ್ರಶಂಸನಾ ಪತ್ರ ನೀಡಿದ ಪೊಲೀಸ್ ಆಯುಕ್ತರ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.jk

ಬೈಕ್ ಸವಾರನನ್ನ ಸಾಯಿಸಿದಕ್ಕೆ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತಿಯಾ.  ನೀನು ಯಾವ್ ಸೀಮೆ ಕಮಿಷನರಯ್ಯ..? ಥೂ.. ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು. ಹೀಗೆ ಪೊಲೀಸ್ ಕಮಿಷನರ್ ವಿರುದ್ಧ ಎಂಎಲ್ ಸಿ ಹೆಚ್.ವಿಶ್ವನಾಥ್ ಹರಿಹಾಯ್ದಿದ್ದಾರೆ.

ಈ ಕುರಿತು ಇಂದು  ಮಾತನಾಡಿದ ಹೆಚ್.ವಿಶ್ವನಾಥ್, ಪೊಲೀಸ್ ಕಮಿಷನರ್ ಬೀದಿಗೆ ಬರಲ್ಲ, ಸಿಟಿ ರೌಂಡ್ ಹಾಕಲ್ಲ. ಎಷ್ಟು ವರ್ಷ ಆಯ್ತು ಬಂದು. ಎಷ್ಟು ಜನ ಡಿಸಿಪಿ,‌ ಎಸಿಪಿಗಳಿದ್ದೀರಿ ಏನ್ ಮಾಡ್ತಿದ್ದೀರಿ. ಕೇವಲ ಟ್ರಾಫಿಕ್ ಪೊಲೀಸರಿಂದ ಟ್ರಾಫಿಕ್ ಕಂಟ್ರೋಲ್ ಆಗಲ್ಲ.  ಜನಪ್ರತಿನಿಧಿಗಳು, ಜನರ‌ ಬಗ್ಗೆ ಗೌರವ ಇಲ್ಲ. ಈ ನಡುವೆ ಸದನದಲ್ಲಿ ಚರ್ಚೆಯೂ ಆಗಿಲ್ಲ, ನಿನ್ನೆ ಸಿಡಿ ಇಡ್ಕೊಂಡು ವಿಷ್ಣು ಚಕ್ರ ತಿರುಗಿಸಿದ್ದಾರೆ. ಮೈಸೂರಿನಲ್ಲಿ ನಡೆದ ನಿನ್ನೆಯ ಘಟನೆ ಖಂಡನೀಯ ಎಂದು ಕಿಡಿಕಾರಿದರು.

ಓಡಾಡಿಸಿಕೊಂಡು ಬೈಕ್ ಹಿಡಿಯಿರಿ ಅಂತ ಕಾನೂನು ಎಲ್ಲಿದೆ…?

ಇದು ಪೊಲೀಸರ ಅಚಾತುರ್ಯದಿಂದ ನಡೆದ ಘಟನೆ. ಓಡಾಡಿಸಿಕೊಂಡು ಬೈಕ್ ಹಿಡಿಯಿರಿ ಅಂತ ಕಾನೂನು ಎಲ್ಲಿದೆ. ಫೋಟೋ, ಸಿಸಿ ಕ್ಯಾಮೆರಾ ಇಲ್ವಾ. ಇವರಿಗೆ ಮಾನ ಮರ್ಯಾದೆ ಇಲ್ಲ, ಇವರು ಗೂಂಡಾಗಿರಿ ಮಾಡ್ತಿದ್ದಾರೆ. ಕಮಿಷನರ್ ಸುಮ್ಮನೆ ಕೂರುವುದಲ್ಲ, ಹೊರಗೆ ಬರಬೇಕು.

ಬೈಕ್ ಸವಾರನ ಸಾಯಿಸಿದ್ದಕ್ಕೆ ಪ್ರಶಂಸನಾ ಪತ್ರ ನೀಡುತ್ತೀಯಾ. ನೀನು ಯಾವ ಸೀಮೆ ಕಮಿಷನರಯ್ಯ‌ ನೀನು. ಸಿಟಿ ಪೊಲೀಸ್ ಕಾಯ್ದೆ ಏನ್ ಹೇಳುತ್ತೆ. ಓಡಿಸಿಕೊಂಡು ಬೈಕ್ ಹಿಡಿ ಅಂತ ಹೇಳುತ್ತಾ. ಸರ್ಕಾರದ ದುಡ್ಡಲ್ಲಿ ಕ್ಯಾಮೆರಾ, ಉಪಕರಣಗಳನ್ನ ಕೊಟ್ಟಿದ್ದೀವಿ. ಈ ವರ್ತನೆಯನ್ನ ಯಾರೂ ಕ್ಷಮಿಸಲ್ಲ‌. ಪೊಲೀಸರು ಸುದ್ದಿ ಕೊಟ್ಟರೆ ಅಲ್ವೆ ಗೃಹ ಸಚಿವರು ಮಾತನಾಡೋದು ಎಂದು ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.mysore-death - bike rider-MLC- H.Vishwanath- outrage-against-police Commissioner

ಮೈಸೂರಿನಲ್ಲಿ ಪೊಲೀಸರು ದಾರಿ ತಪ್ಪುತ್ತಿದ್ದಾರೆ. ಓಡಾಡಿಸಿಕೊಂಡು ವಾಹನ ಇಡಿಯೋದನ್ನ ಬಿಡಬೇಕು. ತಪ್ಪಿಸಿಕೊಂಡು ಓಡಿ ಹೋದರೆ ಕ್ಯಾಮೆರಾ , ಸಿಸಿ ಕ್ಯಾಮೆರಾ ಇಲ್ವ. ತಪಾಸಣೆ ಮಾಡಿ ಆದರೆ ಕ್ಯಾಮೆರಾ ಇರೋದು ಯಾಕೆ. ಈ ಸಂಬಂಧ ನಾನು ಗೃಹ ಸಚಿವರು, ಜಿಲ್ಲಾ ಮಂತ್ರಿ ಜೊತೆ ಮಾತನಾಡ್ತೀನಿ ಎಂದು ಹೆಚ್.ವಿಶ್ವನಾಥ್ ಹೇಳಿದರು.

Key words: mysore-death – bike rider-MLC- H.Vishwanath- outrage-against-police Commissioner