ಬೆಂಗಳೂರು,ಜು,4,2019(www.justkannada.in): ಶಾಸಕರ ರಾಜೀನಾಮೆಗೆ ಪ್ರಧಾನಿ ಮೋದಿ, ಅಮಿತ್ ಷಾ ಕಾರಣ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಸಿ.ಟಿ ರವಿ, ಮೈತ್ರಿ ಸರ್ಕಾರ ಬೀಳಿಸುವ ಸಂಚನ್ನು ನಿಮ್ಮ ಪಕ್ಷದ ಶಾಸಕರೇ ಮಾಡ್ತಿದ್ದಾರೆ. ನಿಮ್ಮ ಅವಾಂತರಗಳೇ ನಿಮ್ಮ ಸರ್ಕಾರ ಬೀಳಲು ಕಾರಣ. ಸಿದ್ದರಾಮಯ್ಯಗೆ ಮೋದಿಯವರ ಜಪ ಮಾಡದಿದ್ದರೆ ಮಾಡಿದ ಊಟ ಜೀರ್ಣ ಆಗಲ್ಲ ಎಂದು ಕಿಡಿಕಾರಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಮೈತ್ರಿ ಸರ್ಕಾರ ಬೀಳಿಸುವ ಸಂಚನ್ನು ನಿಮ್ಮ ಪಕ್ಷದ ಶಾಸಕರೇ ಮಾಡ್ತಿದ್ದಾರೆ ನಿಮ್ಮ ಅವಾಂತರಗಳೇ ನಿಮ್ಮ ಸರ್ಕಾರ ಬೀಳಲು ಕಾರಣ. ಬಿಜೆಪಿ ನಾಯಕರು ನಿಮ್ಮ ಶಾಸಕರನ್ನು ಸೆಳೆಯುವ ಕೆಲಸ ಮಾಡ್ತಿಲ್ಲ, ಮಾಡಲ್ಲ. ನಿಮ್ಮ ಆಂತರಿಕ ಸಮಸ್ಯೆಗಳಿಂದ ನಿಮ್ಮ ಶಾಸಕರು ರಾಜೀನಾಮೆ ಕೊಡ್ತಿದ್ದಾರೆ ಸೋಲಿನ ಹತಾಶೆಯಿಂದ ಸಿದ್ದರಾಮಯ್ಯ ಇಂತಹ ಆರೋಪ ಮಾಡಿದ್ದಕ್ಕೆ ನಮ್ಮ ಖಂಡನೆ ಇದೆ. ನಿಮ್ಮಲ್ಲೇ ನೂರೆಂಟು ಹುಳುಕುಗಳಿವೆ. ಬಿಜೆಪಿ ವಿರುದ್ಧ ಅನಾವಶ್ಯಕ ಆರೋಪ ಬೇಡ. ಸಿದ್ದರಾಮಯ್ಯ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದರು.
ಬಿಜೆಪಿಯಿಂದ 40 ಕೋಟಿ ಆಫರ್ ಎಂಬ ಶಾಸಕ ಕೆ ಮಹಾದೇವ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ ಟಿ ರವಿ, ನಿಮಗೆ ಯಾರು ಹಣದ ಆಫರ್ ಕೊಟ್ಟಿದ್ರು ಅಂತ ಬಹಿರಂಗಪಡಿಸಿ. ಯಾವಾಗ ಆಫರ್ ಬಂತು, ಯಾರು ಆಫರ್ ಮಾಡಿದ್ರು ಅಂತ ಮಹಾದೇವ್ ಬಹಿರಂಗಪಡಿಸಲಿ. ಜೆಡಿಎಸ್ ನಲ್ಲಿ ಸ್ವತ: ಮಾರ್ಕೆಟ್ ಸೃಷ್ಟಿ ಮಾಡಿಕೊಳ್ಳಲು ಮಹಾದೇವ್ ಇಂಥ ಆರೋಪ ಮಾಡಿದ್ದಾರೆ. ಮಹಾದೇವ್ ಕುಮಾರಸ್ವಾಮಿ ಅವರಿಗೆ ಇಂತಹ ಹೇಳಿಕೆಗಳ ಮೂಲಕ ಬ್ಲಾಕ್ ಮೇಲ್ ಮಾಡ್ತಿದಾರೆ. ಮಹಾದೇವ್ ಆರೋಪ ನಿರಾಧಾರ. ಮಹಾದೇವ್ ಪ್ರಚಾರಕ್ಕೆ ಮತ್ತು ಡಿಮ್ಯಾಂಡ್ ಸೃಷ್ಟಿಸಿಕೊಳ್ಳಲು ಬಿಜೆಪಿ ವಿರುದ್ಧ ಹಣದ ಆಮಿಷ ಆರೋಪ ಮಾಡಿದ್ದಾರೆ. ಮಹಾದೇವ್ ತಮ್ಮ ಹೇಳಿಕೆ ಬಗ್ಗೆ ಬಿಜೆಪಿ ಕ್ಷಮೆ ಕೇಳಲಿ. ಮಹಾದೇವ್ ಗೆ ಜೆಡಿಎಸ್ ನಲ್ಲಿ ಬೆಲೆ ಇಲ್ಲ . ಹೀಗಾಗಿ ತಮ್ಮ ಡಿಮ್ಯಾಂಡ್ ಹೆಚ್ಚಿಸಿಕೊಳ್ಳಲು ಇಂಥ ಆರೋಪ ಮಾಡಿದ್ದಾರೆ ಮಹಾದೇವ್ ಹೇಳಿಕೆ ಆಧರಿಸಿ ಎಸಿಬಿ ಸೂಮೋಟೋ ತನಿಖೆ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಎಐಸಿಸಿ ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ನಿರ್ಗಮನ ವಿಚಾರ ಕುರಿತು ಲೇವಡಿ ಮಾಡಿದ ಬಿಜೆಪಿ ಶಾಸಕ ಸಿ ಟಿ ರವಿ, ಇಷ್ಟು ದಿನ ಫ್ರಂಟ್ ಸೀಟಲ್ಲಿ ಕೂತು ಡ್ರೈವ್ ಮಾಡ್ತಿದ್ರು. ಇನ್ನೇಲೆ ಬ್ಯಾಕ್ ಸೀಟಲ್ಲಿ ಕೂತು ಡ್ರೈವ್ ಮಾಡ್ತಾರೆ. ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರ್ತಿರುವ ಹೊಸಬರು ಸಹ ರಬ್ಬರ್ ಸ್ಟಾಂಪ್ ಗಳು. ಕಾಂಗ್ರೆಸ್‌ನಲ್ಲಿ ಭಟ್ಟಂಗಿಗಳೇ ತುಂಬಿಕೊಂಡಿದ್ದಾರೆ. ರಾಹುಲ್ ಗಾಂಧಿ ತಮ್ಮ ನಿರ್ಗಮನ ಸಂದರ್ಭದಲ್ಲಾದ್ರೂ ಸತ್ಯ ಹೇಳ್ತಿಲ್ಲ. ಈಗಲೂ ಇವಿಎಂ, ಚುನಾವಣಾ ಆಯೋಗದ ಮೇಲೆ ರಾಹುಲ್ ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಯಾರೇ ಹೊಸ ಅಧ್ಯಕ್ಷರಾದ್ರೂ ಗಾಂಧಿ ಕುಟುಂಬದ ಹಿಡಿತ ಇದ್ದೇ ಇರುತ್ತೆ. ಹೊಸ ಅಧ್ಯಕ್ಷರ ಮೇಲೆ ಗಾಂಧಿ ಕುಟುಂಬದ ಹತೋಟಿ ಇರಲ್ಲ ಅಂದ್ರೆ ಹೊಸ ಕಾಂಗ್ರೆಸ್ ಅಂತ ಹೇಳಬಹುದು ಎಂದು ಟೀಕಿಸಿದರು.
ಆನಂದ್ ಸಿಂಗ್ ವಿರುದ್ಧ ಸ್ಪೀಕರ್ ಗೆ ಕಾಂಗ್ರೆಸ್ ನಾಯಕರ ದೂರು ವಿಚಾರ ಕುರಿತು ಮಾತನಾಡಿದ ಶಾಸಕ ಸಿಟಿ ರವಿ, ಆನಂದ್ ಸಿಂಗ್ ಅವರ ಮೇಲೆ ಕಾಂಗ್ರೆಸ್ ನವ್ರಿಗೆ ಕಾಳಜಿ ಇದ್ದಿದ್ರೆ ಕರೆಸಿ ಮಾತಾಡ್ತಿದ್ರು. ಹೀಗೆ ಸ್ಪೀಕರ್ ಗೆ ದೂರು ಕೊಡ್ತಿರಲಿಲ್ಲ. ಸ್ಪೀಕರ್ ಮೇಲೆ ನಂಬಿಕೆ ಇದೆ. ಅವರು ಅವರ ವಿವೇಚನೆ ಬಳಸಿ ರಾಜೀನಾಮೆ ಒಪ್ಪಬೇಕೋ ಬೇಡವೋ ಅಂತ ತೀರ್ಮಾನಿಸ್ತಾರೆ. ಮೈತ್ರಿ ಸರ್ಕಾರದ ಫೌಂಡೇಷನ್ ನಲ್ಲಿ ಒಂದೊಂದೇ ಕಲ್ಲು ಬೀಳಲು ಶುರುವಾಗಿದೆ. ಉಮೇಶ್ ಜಾಧವ್ ಅವರಿಂದ ಶುರುವಾದ ಶಾಸಕರ ರಾಜೀನಾಮೆ ಈಗಲೂ ಮುಂದುವರೀತಿದೆ. ಸಮಯ ಸಂದರ್ಭ ನೋಡಿ ಫೌಂಡೇಷನ್ ಕಲ್ಲುಗಳು ಬೀಳ್ತವೆ ಎಂದು ಲೇವಡಿ ಮಾಡಿದರು.
Key words: Siddaramaiah- accusation -Modi – responsible –resignation-ct ravi-outrage