ಮೈಸೂರು,ಜು,5,2019(www.justkannada.in): ಐರಾವತ ಯೋಜನೆ ಫಲಾನುಭವಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಸವಲತ್ತು ವಿತರಣೆ ಮಾಡಿದರು.
ನಗರದ ಜೆಕೆ ಮೈದಾನದಲ್ಲಿ ಸವಲತ್ತು ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಆಯ್ಕೆಯಾದ ಫಲಾನುಭವಿಗಿಳಿಗೆ ವಾಣಿಜ್ಯ ಉದ್ದೇಶದ ಕಾರ್ ಅನ್ನ ಸಚಿವ ಜಿ.ಟಿ ದೇವೇಗೌಡರು ವಿತರಣೆ ಮಾಡಿದರು. 200 ಫಲಾನುಭವಿಗಳಲ್ಲಿ 94 ಫಲಾನುಭವಿಗಳಿಗೆ ಟ್ಯಾಕ್ಸಿ ವಿತರಣೆ ಮಾಡಲಾಯಿತು. ಈ ವೇಳೆ ಶಾಸಕರುಗಳಾದ ಎಲ್ ನಾಗೇಂದ್ರ, ಹರ್ಷವರ್ಧನ್,ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಭಾಗಿಯಾಗಿದ್ದರು.
ಸವಲತ್ತು ವಿತರಣೆ ಬಳಿಕ ಮಾತನಾಡಿದ ಸಚಿವ ಜಿ.ಟಿ ದೇವೇಗೌಡರು, ರಾಜ್ಯದಲ್ಲಿ ಸುಮಾರು 22 ಕೋಟಿ ರೂ ಗಳ ವೆಚ್ಚದಲ್ಲಿ ಈ ಯೋಜನೆಯನ್ನ ನೀಡಲಾಗುತ್ತಿದೆ. ಇದಕ್ಕೆ ಸಮಾಜಕಲ್ಯಾಣ ಸಚಿವ ಪ್ರಿಯಾಕ ಖರ್ಗೆ ಅಭಿನಂದಿಸುತ್ತೇನೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸವಲತ್ತು ವಿತರಣೆ ಮಾಡಲಾಯಿತು. ಈಗ ಮೈಸೂರಿನಲ್ಲಿ ವಿತರಣೆ ಮಾಡುತ್ತಿದ್ದೇವೆ. ಸರ್ಕಾರ ನಿರುದ್ಯೋಗಿ ಯುವಕರಿಗೆ ಅನುಕೂಲವಾಗಲೆಂದು ಇಂತಹ ಯೋಜನೆ ಜಾರಿ ಮಾಡಲಾಗಿದೆ. ಎಲ್ಲರೂ ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ಜೊತೆ ಬರವು ಪ್ರಯಾಣಿಕರನ್ನು ನಿಮ್ಮ ಬಂಧುಗಳಂತೆ ಸೇವಾ ಮನೋಭಾವನೆಯಿಂದ ನೋಡಬೇಕು. ನಿಮ್ಮ ವೃತ್ತಿಯನ್ನು ಗೌರದಿಂದ ಕಾಣಿ ಎಂದು ಫಲಾನುಭವಿಗಳಿಗೆ ಸಲಹೆ ನೀಡಿದರು.
Key words: Minister G. T Deve Gowda – distributed – privilege – beneficiaries – Airavata project – Mysore