ಪಾಲಿಕೆ ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನ ಖಂಡಿಸಿ ವಿಜಯನಗರ ನಿವಾಸಿಗಳಿಂದ ಪ್ರತಿಭಟನೆ

ಮೈಸೂರು,ಏಪ್ರಿಲ್,02,2021(www.justkannada.in) : ಮೈಸೂರು ನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನ ಖಂಡಿಸಿ ವಿಜಯನಗರ 1 ಮತ್ತು 2 ನೇ ಹಂತದ ನಿವಾಸಿಗಳು ಪ್ರತಿಭಟನೆ ನಡೆಸಿದರು.

Illegally,Sand,carrying,Truck,Seized,arrest,driver

ವಿಜಯನಗರದ ಆರ್.ಕೆ.ಕಾರ್ನರ್ ಬಳಿ ಜಮಾವಣೆಗೊಂಡ ವಿಜಯನಗರ ನಿವಾಸಿಗಳು ಮೈಸೂರು ನಗರ ಪಾಲಿಕೆಯು  15% ತೆರಿಗೆ ಹೆಚ್ಚಿಸಿರುವುದನ್ನ ವಿವಿಧ ಘೋಷಣೆಗಳಣ್ನು ಕೂಗಿ ಖಂಡಿಸಿದರು.

ಈ ಸಂದರ್ಭ ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಪ್ರೊಫೆಸರ್ ಗೋಪಾಲ್ ಮಾತನಾಡಿ, ಕೊರೊನಾ ಸಂಧರ್ಭದಲ್ಲಿ ಜನರು ಆರ್ಥಿಕವಾಗಿ ಸಂಕಷ್ಟವನ್ನ ಅನುಭವಿಸುತಿದ್ದಾರೆ. ಕೆಲಸವಿಲ್ಲದೆ, ಹಣವಿಲ್ಲದೆ ಜನರು ಕುಗ್ಗಿ ಹೋಗಿದ್ದಾರೆ ಈ ಸಂಧರ್ಭದಲ್ಲಿ ತೆರಿಗೆ ಏರಿಕೆ ಮಾಡುವುದು ಎಷ್ಟರಮಟ್ಟಿಗೆ ಸರಿಯಾದ ನಿರ್ಧಾರ ಎಂದು ಪ್ರಶ್ನಿಸಿದರು.

ಪ್ರತಿವರ್ಷ ಸರಿಯಾದ ರೀತಿಯಲ್ಲಿ ತೆರಿಗೆ ಪಾವತಿಮಾಡುತ್ತಿದ್ದೇವೆ. ಹೀಗಿದ್ದರೂ, ಪಾಲಿಕೆ ಯವುದೇ ರಸ್ತೆ ಚರಿಂಡಿಗಳನ್ನ ಸರಿಪಡಿಸುವ ಕೆಲಸ ಕೈಗೊಂಡಿಲ್ಲ. ತೆರಿಗೆ ಹಣವನ್ನ ಸಂಗ್ರಹ ಮಾಡುವಲ್ಲಿ ಪಾಲಿಕೆ ಸೋತಿದೆ ಈಗಿರುವಾಗ 15% ತೆರಿಗೆ ಹೆಚ್ಚಿಸುವ ಕೆಲಸಕ್ಕೆ ಕೈಹಾಕಿರುವುದು ಅವೈಜ್ಞಾನಿಕ. ಈ ಕೂಡಲೆ ತೆರಿಗೆ ಹೆಚ್ಚು ಮಾಡಿರುವುದನ್ನ ಹಿಂಪಡೆಯಬೇಕು. ಇಲ್ಲವಾದರೆ, ಕರನಿರಾಕರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.Palike-Property-taxes-increased-Condemnation-Vijayanagar-inhabitants-Protest

ಈ ಸಂದರ್ಭ ಚಾಮರಾಜ ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ಕುಮಾರ್ ಗೌಡ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ರವಿ (ರಾಜಕೀಯ), ಶಂಕರ್, ಮಹದೇವಪ್ಪ, ಶ್ರೀನಿವಾಸ್, ರಾಜ ಶೇಖರ್,ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

key words : Palike-Property-taxes-increased-Condemnation-Vijayanagar-inhabitants-Protest