ಮಡಿಕೇರಿ,ಜು,5,2019(www.justkannada.in): ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು ವಾಹನ ಸವಾರರು ಆತಂಕ ಮನೆ ಮಾಡಿದೆ.
ಮಡಿಕೇರಿಯಿಂದ 5 ಕಿಲೋ ಮೀಟರ್ ದೂರದ ಕಾಟಕೇರಿ ಜಂಕ್ಷನ್ ಬಳಿ ಬಿರುಕು ಕಾಣಿಸಿಕೊಂಡಿದೆ. ಕಳೆದ ಬಾರಿ ಇದೇ ರಸ್ತೆಯಲ್ಲಿ ಕುಸಿತ ಕಂಡಿತ್ತು. ನಂತರ ಹೆದ್ದಾರಿ ಪ್ರಾಧಿಕಾರ ಸೀಮೆಂಟ್ ಚೀಲ ಇಟ್ಟು ಕುಸಿದಿದ್ದ ರಸ್ತೆ ಸರಿ ಮಾಡಿತ್ತು. ಇದೀಗ ಸುರಿದ ಸಾಧಾರಣ ಮಳೆಗೆ ಅದೇ ಸ್ಥಳದಲ್ಲಿ ಹೆದ್ದಾರಿಯಲ್ಲಿ ಬಿರುಕು ಬಿಟ್ಟಿದೆ. ಇನ್ನು ವಾಹನ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನಲೆ ಬಿರುಕು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ
ಕಳೆದ ಬಾರಿ ಕುಸಿದಿದ್ದ ಜಾಗದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿರುವುದಕ್ಕೆ ವಾಹನ ಸವಾರರು ಆತಂಕಗೊಂಡಿದ್ದು, ಅವೈಜ್ಞಾನಿಕ ಕಾಮಗಾರಿ ಮಾಡಿರುವುದೇ ಬಿರುಕಿಗೆ ಕಾರಣಾನಾ..? ಎಂಬ ಪ್ರಶ್ನೆ ಮೂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಳಪೆ ಕಾಮಗಾರಿಗೆ ನಡೆದಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ.
Key words: Madikeri – Mangalore- National Highway- Crack