ಬೆಂಗಳೂರು,ಏಪ್ರಿಲ್,05,2021(www.justkannada.in) : ಕೊರೊನಾ ಹೆಚ್ಚಳ ಹಿನ್ನಲೆ ಈಜುಕೊಳ ಬಂದ್ ಮಾಡುವಂತೆ ಸರ್ಕಾರದ ಆದೇಶಕ್ಕೆ ಕರ್ನಾಟಕ ಈಜು ಸಂಸ್ಥೆ ಕಾರ್ಯಕಾರಿ ಸಮಿತಿ ಬೇಸರವ್ಯಕ್ತಪಡಿಸಿದೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಈಜು ಸಂಸ್ಥೆ ಸದಸ್ಯ ನಾಭಿರಾಜ್ ಮಾತನಾಡಿ, ಈಜು ಕೊಳಗಳಿಂದ ಕೊರೊನಾ ಹರಡಿರುವ ಬಗ್ಗೆ ಒಂದೂ ಪ್ರಕರಣ ದಾಖಲಾಗಿಲ್ಲ. ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಿ ಈಜುಕೊಳ ನಡೆಸುತ್ತಿದ್ದೆವು. ಆದರೆ, ರಾಜ್ಯ ಸರ್ಕಾರದ ಏಕಾಏಕಿ ನಿರ್ಧಾರದಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.
ಕ್ಲೋರಿನೇಟೆಡ್ ಈಜುಕೊಳದ ನೀರಿನಲ್ಲಿ ಕೋವಿಡ್ 19 ಹರಡಲ್ಲ. ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಧೃಡಪಡಿಸಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಈಜುಕೊಳಗಳು ಅವಶ್ಯಕ. ಬೇಸಿಗೆ ಸಮಯದಲ್ಲಿ ಸಾರ್ವಜನಿಕರು ಈಜುಕೊಳಗಳ ಅವಲಂಭಿಸಿದ್ದಾರೆ. ಹಾಗಾಗಿ, ರಾಜ್ಯ ಸರ್ಕಾರ ಇತರ ಉದ್ಯಮಗಳಂತೆ ನಮಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
key words : Background-Swimming-Pool-Swimming-organization-bored-government-order