ಮೈಸೂರು,ಏಪ್ರಿಲ್,06,2021(www.justkannada.in) : ನನ್ನ ವಾರ್ಡಿನ ಜನ ನೀರು ಕೊಡಿ, ಇಲ್ಲ ಸ್ವಲ್ಪ ವಿಷವನ್ನಾದರು ಕೊಡಿ ಎಂದು ಕೇಳುತ್ತಿದ್ದಾರೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಅಧಿಕಾರಿ ಸರಿಯಾದ ವರ್ತನೆ ತೋರುತ್ತಿಲ್ಲ ಎಂದು ಆರೋಪಿಸಿ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ ನೆಸಲಾಯಿತು.ನಗರದ ಆರ್.ಟಿ.ಓ ವೃತ್ತದ ಬಳಿಯ ಡಬಲ್ ವಾಟರ್ ಟ್ಯಾಂಕ್ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಅಧಿಕಾರಿ ವಿರುದ್ದ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಈ ವೇಳೆ ಲೋಕೇಶ್ ಪಿಯಾ ಮಾತನಾಡಿ, ಕಾರ್ಯಪಾಲಕ ಅಭಿಯಂತರ ಸುವರ್ಣ ಗೋಪಾಲ್ ಅವರಿಗೆ ಪಾಲಿಕೆ ಸದಸ್ಯನಾಗಿ ಕರೆ ಮಾಡಿದರೂ, ದರ್ಪದ ಮಾತುಗಳನಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವಾರ್ಡ್ ನಂ.50ರಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಸಾರ್ವಜನಿಕರು ಕರೆ ಮಾಡಿದರು ಎಂಜಿನಿಯರ್ ಸುವರ್ಣ ಗೋಪಾಲ್ ಯಾವುದೇ ಉತ್ತರ ಕೊಡುತ್ತಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.
ನನ್ನ ವಾರ್ಡಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಇಂಜಿನಿಯರ್ ಸುವರ್ಣ ಗೋಪಾಲ್ ರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಅವರ ಮನೆಯ ಮುಂದೆಯೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
key words : ward’s-People-Water-little bit-Became-poisoned-Says-Member-palike-Lokesh Pia-Bored