ಮೈಸೂರು,ಏಪ್ರಿಲ್,08,2021(www.justkannada.in) : ಕೆ ಎಸ್ ಆರ್ ಟಿ ಸಿ ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಪ್ರಯಾಣಿಕರಿಲ್ಲದೇ ಆಟೋ ಚಾಲಕರು ಕಂಗಾಲಾಗಿದ್ದಾರೆ.
ಜನರಿಲ್ಲದೇ ಬಸ್ ನಿಲ್ದಾಣಗಳು ಖಾಲಿ,ಖಾಲಿಯಾಗಿವೆ. ಪ್ರಯಾಣಿಕರನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಆಟೋ ಚಾಲಕರು ಅತಂತ್ರವಾಗಿದ್ದಾರೆ.
ಮೈಸೂರು ನಗರ ಬಸ್ ನಿಲ್ದಾಣ, ಕೇಂದ್ರೀಯ ಬಸ್ ನಿಲ್ದಾಣದ ಬಳಿ ಆಟೋಗಳು ಖಾಲಿ, ಖಾಲಿ ನಿಂತಿವೆ. ಬೆಳಗ್ಗೆಯಿಂದ ಕೇವಲ 100 ರೂ. ಬಾಡಿಗೆ ದೊರೆತಿದೆ. ಬಾಕಿ ದಿನ 500, 600 ಬಾಡಿಗೆ ಸಿಗುತ್ತಿತ್ತು. ಈಗ ಬಸ್‌ಗಳಿಲ್ಲ, ಅದಕ್ಕೆ, ಜನ ಬರುತ್ತಿಲ್ಲ. ಹೀಗಾಗಿ, ನಮಗೂ ಬಾಡಿಗೆ ಇಲ್ಲ. ನಿನ್ನೆಯಿಂದ ಖಾಲಿ ನಿಂತಿದ್ದಿವಿ, ನಮ್ಮ ಕಷ್ಟ ಯಾರ್ ಕೇಳ್ತಾರೆ ಎಂದು ಆಟೋ ಚಾಲಕರುಗಳು ಬೇಸರವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರು 10 ರೂಪಾಯಿ ಜಾಸ್ತಿ ಕೇಳಿದರೂ ಕೊಡಲ್ಲ, ಅವ್ರಿಗೂ ಕಷ್ಟ ಇದೆ. ನಮಗೆ ಆಟೋ ಲೋನ್, ಮನೆ ಬಾಡಿಗೆ, ಹೆಂಡ್ತಿ ಮಕ್ಕಳು ಸಾಕೋದೆ ಕಷ್ಟವಾಗಿದೆ. ಸರ್ಕಾರಗಳು ನಮ್ಮ ಕಡೆ ಗಮನನೇ ನೀಡಲ್ಲ. ಈಗ ಮತ್ತೆ ಕೊರೊನಾ ಅಂತಾ ಬೇರೆ ಹೇಳುತ್ತಿದ್ದಾರೆ. ಯಾರಿಗೇ ಹೇಳೋದು ನಮ್ಮ ಕಷ್ಟ ಎಂದು ಮೈಸೂರಿನಲ್ಲಿ ಆಟೋ ಚಾಲಕರ ಅಳಲು ತೋಡಿಕೊಂಡಿದ್ದಾರೆ.
key words : KSRTC-Employees-Strike-Boredom-Auto Drivers-Bored