ಬೆಂಗಳೂರು, ಏಪ್ರಿಲ್ 09, 2021 (www.justkannada.in): ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುವ ನಟ ಚೇತನ್ ಥಿಯೇಟರ್ ಗಳಲ್ಲಿ ಶೇ.50ರಷ್ಟು ಮಾತ್ರ ಭರ್ತಿ ಕುರಿತು ‘ಇನ್’ಜಸ್ಟೀಸ್’ ಎಂದು ಮಾತನಾಡುವ ‘ಸ್ಟಾರ್’ ನಟರ ಕುರಿತು ಮಾತನಾಡಿದ್ದರೆ.
ಈ ಕುರಿತ ಅವರ ಟ್ವಿಟ್ಟರ್ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಬಹುತೇಕ ಸ್ಟಾರ್ ನಟರು ಥಿಯೇಟರ್ ಗಳಲ್ಲಿ ಶೇ.50ರಷ್ಟು ಸೀಟುಗಳ ಭರ್ತಿಗೆ ಮಾತ್ರ ಅವಕಾಶ ನೀಡಿರುವುದನ್ನು ಅನ್ಯಾಯ ಎಂದು ಕರೆಯುತ್ತಾರೆ. ಆದರೆ ಆದರೆ ಚಿತ್ರದ ನಿರ್ದೇಶಕರು ಹಾಗೂ ಬರಹಗಾರರಿಗೆ ಆಗುವ ‘ಇನ್ ಜಸ್ಟೀಸ್’ ಯಾರೂ ಮಾಡುವುದಿಲ್ಲ ಎಂದಿದ್ದಾರೆ ಚೇತನ್.
ಒಂದು ಚಿತ್ರದ ಯಶಸ್ಸಿಗೆ ದುಡಿಯುವ, ಪ್ರಮುಖ ಪಾತ್ರ ವಹಿಸುವ ನಿರ್ದೇಶಕ ಹಾಗೂ ಬರಹಗಾರರು ಸ್ಟಾರ್ ಗಳಾಗುವುದೇ ಇಲ್ಲ. ಥಿಯೇಟರ್ ಮುಂದೆ ದೊಡ್ಡ ಕಟೌಟ್ಗಳಾಗಿ, ಸ್ಟಾರ್ ಕ್ಲಬ್ ಗಳ ಮೂಲಕವೂ ಸ್ಟಾರ್ ಗಳೇ ಎಲ್ಲೆಡೆ ಮೆರೆಯುತ್ತಾರೆ. ಇದು ನಿಜವಾದ ಅನ್ಯಾಯ ಎಂದು ಚೇತನ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.