ಗದಗ,ಏಪ್ರಿಲ್,10,2021(www.justkannada.in) : ರಾಜ್ಯ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಇಬ್ಬರು ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾನೂನು, ಸಾರ್ವಜನಿಕ ನೀತಿ ಮತ್ತು ಸಮಾಜ ಸೇವೆಗೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ ಅವರಿಗೆ ಡಾಕ್ಟರ್ ಆಫ್ ಲಾಸ್ ( ಎಲ್.ಎಲ್.ಬಿ) ಗೌರವ ಡಾಕ್ಟರ್ ಪದವಿಯನ್ನು ಹಾಗೂ ದೇಶದ ಗ್ರಾಮೀಣ ಬುಡಕಟ್ಟು ಜನಾಂಗದ ಪುನರ್ ನಿರ್ಮಾಣದಲ್ಲಿ ಸಲ್ಲಿಸಿರುವ ಮಹತ್ತರ ಸೇವೆಗಾಗಿ ಐ.ಎ.ಎಸ್ ಹಿರಿಯ ಅಧಿಕಾರಿ ಡಾಕ್ಟರ್ ಅಶೋಕ ದಳವಾಯಿ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್( ಡಿಲಿಟ್ ) ಗೌರವ ಡಾಕ್ಟರೇಟ್ ಪದವಿಯನ್ನು ವಿಶ್ವ ವಿದ್ಯಾಲಯದ ಸಹಕುಲಾಧಿಪತಿಗಳಾಗಿರುವ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಥಮ ಘಟಿಕೋತ್ಸವ ರ‍್ಯಾಂಕ್ ಹಾಗೂ ಪ್ರಶಸ್ತಿ ವಿಜೇತರ ವಿವರ
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ 2018-19 ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸ್ನಾತಕೋತ್ತರ 5 ಕೋರ್ಸುಗಳಿಗೆ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ನೀಡಲಾಯಿತು. ದ್ವಿತೀಯ ಹಾಗೂ ತೃತೀಯ ರ‍್ಯಾಂಕ್ ಪಡೆದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಐದು ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ , ದ್ವಿತೀಯ ಹಾಗೂ ತೃತೀಯ ರ‍್ಯಾಂಕ್ ವಿಜೇತರ ವಿವರ ಕ್ರಮವಾಗಿ ಈ ಕೆಳಗಿನಂತಿದೆ.
ಎಂಬಿಎ ಕೋರ್ಸನಲ್ಲಿ ಸುಧೀಶ ರಾವ್ -ಪ್ರಥಮ, ಪೂರ್ಣಿಮಾ- ದ್ವಿತೀಯ, ವಿರುಪಾಕ್ಷಯ್ಯ ಕುಲಕರ್ಣಿ- ತೃತೀಯ ಸ್ಥಾನ ಪಡೆದಿರುತ್ತಾರೆ. ಎಂಎ ( ಆರ್.ಡಿ.ಪಿ.ಆರ್) ನಾಗರಾಜ ಎಸ್, ಸಿದ್ದೇಶ ಎಸ್, ಫಾತಿಮಾ ನರಗುಂದ. ಎಂ.ಎಸ್‌ಸಿ( ಜಿ.ಐ.ಎಸ್.) , ಬಸಂತಿ ಶರಣಬಸಪ್ಪ ಪಾಟೀಲ , ಸುಮಲತಾ ಯಲಬಾನವಿ- ದೀಪಾ ಹಂಚಿನಾಳ , ಎಂ.ಎಸ್. ಡಬ್ಲು ಕೋರ್ಸನಲ್ಲಿ ಪ್ರತಿಭಾ ಸಾಸ್ವಿಹಾಳಿ, ಸುಮಾ ಪೂಜಾರ, ಶಿವಯೋಗಪ್ಪ ರಿತ್ತಿ : ಎಂ.ಕಾA ಕೋರ್ಸನಲ್ಲಿ ಪರಮೇಶ್ವರ , ಮಂಜು ನಾಥ ಜಿ , ಅಶ್ವಿನಿ ಓದುಗೌಡ್ರ.
2019-20 ನೇ ಸಾಲಿನ ರ‍್ಯಾಂಕ್ ವಿಜೇತರ ವಿವರ
ಎಂ.ಬಿ.ಎ ಕೋರ್ಸನಲ್ಲಿ ಗಿರೀಶ ಮೇವುಂಡಿ, ಭಾಗ್ಯಶ್ರೀ ಪಾಟೀಲ, ಓಂಕಾರ ರೆಡ್ಡಿ ಕುರಹಟ್ಟಿ , ಎಂ.ಎ. (ಆರ್.ಡಿ.ಪಿ.ಆರ್.) ಕೋರ್ಸನಲ್ಲಿ ಸೀಮಾ ಕೌಸರ್ ಕುಕನೂರ, ಹಂಸವತಿ ಡಿ, ಶ್ರೀಶೈಲ ಪೊಲೀಶಿ; ಎಂ.ಎಸ್.ಸಿ ( ಜಿ.ಐ.ಎಸ್.) ಕೋರ್ಸನಲ್ಲಿ ಶಿವಕುಮಾರ ರಕ್ಕಸಗಿ, ಅರ್ಚನಾ ಹಾನಗಲ್ , ಡಿ ಪ್ರತಿಭಾ; ಎಂ.ಎಸ್.ಸಿ. ( ಎಫ್.ಎಸ್.ಟಿ) ಕೋರ್ಸನಲ್ಲಿ ಮನುಶಾ ಸಿ, ಗುತ್ತವಾಣಿ ಪ್ರಸನ್ನ , ಶ್ರೇಯಸ್ ಗೌಡ ಬಿ.ಎಚ್; ಎಂ.ಪಿ.ಎಚ್ ಕೋರ್ಸನಲ್ಲಿ ಡಾ. ಮಹಿಮಾ ಬೆಳವಡಿ, ಕಲ್ಲನಗೌಡ ಪಾಟೀಲ, ಡಾ. ಪ್ರೀತಿ ಪಟ್ಟಣಶೆಟ್ಟಿ; ಎಂ.ಎಸ್. ಡಬ್ಲ್ಯೂ ಕೋರ್ಸನಲ್ಲಿ ನಿಶಾ, ನಾಗರತ್ನ ಮುನೆನ್ನವರ, ದೇವರಾಜ ದೊಡ್ಡಮನಿ, ಎಂ.ಕಾA ಕೋರ್ಸನಲ್ಲಿ ಐಶ್ವರ್ಯ ಶ್ರೀಶೈಲ ಜೋಳದ, ಸುಜಾತಾ ಗೊರವನಕೊಳ್ಳ, ಸೋನಿಯಾ ದತ್ತುಸಾ ಬಾಕಳೆ.
2018-19 ರ ಸಾಲಿನ 5 ಸ್ನಾತಕೋತ್ತರ ಕೋರ್ಸುಗಳ ಪೈಕಿ ಬಸಂತಿ ಶರಣಬಸಪ್ಪ ಪಾಟೀಲ ಅವರು( ಎಂ.ಎಸ್ ಸಿ ( ಜಿ.ಐ.ಎಸ್) 85.6% ) ಅತಿ ಹಚ್ಚು ಅಂಕ ಪಡೆದಿದ್ದಾರೆ. ಅದೇ ರೀತಿ 2019-20 ನೇ ಸಾಲಿನ 7 ಸ್ನಾತಕೋತ್ತ ರ ಕೋರ್ಸುಗಳಲ್ಲಿ ಮನುಶಾ.ಸಿ ಅವರು ( ಎಂ.ಎಸ್.ಸಿ( ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ) 90.1 % ಅತಿ ಹೆಚ್ಚು ಅಂಕ ಪಡೆಯುವ ಮೂಲಕ ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದು , ಅವರಿಗೆ ಸಹ ಕುಲಾಧಿಪತಿ ಕೆ.ಎಸ್.ಈಶ್ವರಪ್ಪ ಅವರು ಸ್ವರ್ಣ ಪದಕ ನೀಡುವ ಮೂಲಕ ಪ್ರಶಸ್ತಿ ಪತ್ರ ವಿತರಿಸಿದರು.ಈ ಸಂದರ್ಭದಲ್ಲಿ ಘಟಿಕೋತ್ಸವದ ಮುಖ್ಯ ಅತಿಥಿ ಮೈಸೂರಿನ ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ಹಾಗೂ ಗ್ರಾಸ್ ರೂಟ್ಸ್ ರಿಸರ್ಚ್ & ಅಡೊಕಸಿ ಮೂವ್‌ಮೆಂಟ್ (ಗ್ರಾಮ್)ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಆರ್. ಬಾಲಸುಬ್ರಮಣ್ಯಂ, ಗ್ರಾಮೀಣಾಭಿವೃದ್ಧಿ ವಿವಿ ಕುಲಸಚಿವ ಪ್ರೊ. ವಿಷ್ಣುಕಾಂತ ಚಟಪಲ್ಲಿ, ರಿಜಿಸ್ಟ್ರಾರ್ ಬಸವರಾಜ ಲಕ್ಕಣ್ಣವರ, ವಿತ್ತೀಯ ಅಧಿಕಾರಿ ಪ್ರಶಾಂತ ಜೆ.ಸಿ.,ವಿವಿಯ ವಿವಿಧ ಕೇಂದ್ರಗಳ ನಿರ್ದೇಶಕರು, ಶಾಲೆಗಳ ಮುಖ್ಯಸ್ಥರು, ಕಾರ್ಯನಿವಾಹಕ ಪರಿಷತ್ತಿನ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು ಸೇರಿದಂತೆ ಪದವಿ ಪಡೆಯುವ ಅಭ್ಯರ್ಥಿಗಳು, ಪಾಲಕರು ಇತರರು ಇದ್ದರು.
key words : Rural Development-VV First-Convocation-Minister-Health-K.S. Eshwarappa-conferred-Honorary-Doctorate-H.K.Patiala-Ashoka Dalwai