ಬೆಂಗಳೂರು,ಏಪ್ರಿಲ್,12,2021(www.justkannada.in): ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿನ ಅಬ್ಬರ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿರ್ಧಾರ ಜನರ ಕೈಯಲ್ಲಿ ಇದೆ. ಲಾಕ್ ಡೌನ್ ಹೇರುವ ಅನಿವಾರ್ಯ ತಂದುಕೊಳ್ಳಬೇಡಿ ಎಂದು ಜನರಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತೆ ಲಾಕ್ ಡೌನ್ ಪರಿಸ್ಥಿತಿ ನಿರ್ಮಾಣ ಆದ್ರೆ ಅದಕ್ಕೆ ಜನರೇ ಕಾರಣ. ಕೋವಿಡ್ ನಿಯಮ ಪಾಲಿಸದಿದ್ದರೆ ಮತ್ತೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬರಬಹುದು ಎಂದು ಲಾಕ್ ಡೌನ್ ಬಗ್ಗೆ ಸುಳಿವು ನೀಡಿದ್ದಾರೆ.
ಲಾಕ್ ಡೌನ್ ಮಾಡಬೇಕೋ, ಮಾಡಬಾರದೋ ಎಂಬುದು ಜನರ ಕೈಯಲ್ಲಿದೆ ನಮಗೆ ನಾವೇ ಲಾಕ್ ಹಾಕಿಕೊಳ್ಳೋಣ. ನಮಗೆ ಯಾಕೆ ಲಾಕ್ ಡೌನ್ ಬೇಕು. ಲಾಕ್ ಡೌನ್ ಜಾರಿ ಮಾಡಲು ಸರ್ಕಾರಕ್ಕೆ ಇಷ್ಟವಿಲ್ಲ. ಅನಗತ್ಯವಾಗಿ ಗುಂಪುಗೂಡಬೇಡಿ ಎಂದು ಜನರಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮನವಿ ಮಾಡಿದರು.
Key words: corona-increase- Don’t -bring -lock down- –Minister- Sudhakar.