ಬೆಂಗಳೂರು,ಏಪ್ರಿಲ್,15,2021(www.justkannada.in): ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರ ಹೆಚ್ಚಾಗಿದ್ದು ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.
ಕಳೆದ ವರ್ಷದ ಚಿಕಿತ್ಸಾ ದರವನ್ನೇ ರಾಜ್ಯ ಸರ್ಕಾರ ಈಗಲೂ ಮರು ಅನುಷ್ಟಾನಗೊಳಿಸಿದೆ. ಜನರಲ್ ವಾರ್ಡ್ ಗೆ 5,200, ಆಕ್ಸಿಜನ್ ವ್ಯವಸ್ಥೆ ಇರುವ ವಾರ್ಡ್ ಗೆ ಪ್ರತಿನಿತ್ಯ 7 ಸಾವಿರ ರೂ.ಐಸಿಯು ವಾರ್ಡ್ ಗೆ 8,500 ರೂ, ಐಸಿಯು ಜತೆ ವೆಂಟಿಲೇಟರ್ ವ್ಯವಸ್ಥೆಗೆ 10 ಸಾವಿರ ರೂ ನಿಗದಿ ಮಾಡಲಾಗಿದೆ.
ಇನ್ನು ನಗದು, ವಿಮಾ ಇದ್ದರೇ ಜನರಲ್ ವಾರ್ಡ್ ಗೆ 10 ಸಾವಿರ ರೂ, ಅಕ್ಸಿಜನ್ ವ್ಯವಸ್ಥೆಯ ವಾರ್ಡ್ ಗೆ ಪ್ರತಿನಿತ್ಯ 12 ಸಾವಿರ ರೂ. ಐಸಿಯುಗೆ 15 ಸಾವಿರ ರೂ. ಐಸಿಯು ಜೊತೆಗೆ ವೆಂಟಿಲೇಟರ್ ಗೆ ಪ್ರತಿನಿತ್ಯ 25 ಸಾವಿರ ರೂ. ದರ ನಿಗದಿ ಮಾಡಲಾಗಿದೆ.
Key words: Rate -treatment – corona -private hospitals