ಮೈಸೂರು,ಏಪ್ರಿಲ್,22,2021(www.justkannada.in): ಕೊರೋನಾ ಮಹಾಮಾರಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಮೈಸೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು ಈ ನಡುವೆ ನಮಗೆ ಕನಿಷ್ಠ ಅರ್ಧ ದಿನವಾದ್ರೂ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಸಚಿವರಾದ ಎಸ್.ಟಿ ಸೋಮಶೇಖರ್ ಮತ್ತು ಡಾ.ಕೆ.ಸುಧಾಕರ್ ಅವರಿಗೆ ಮೈಸೂರಿನ ವರ್ತಕರು ಮನವಿ ಮಾಡಿದ್ದಾರೆ.
ಹೋಟೆಲ್ ಗಳಿಗೆ ಅವಕಾಶ ನೀಡಿ ಚಿನ್ನ, ಬಟ್ಟೆ ಅಂಗಡಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದ ಹಿನ್ನೆಲೆ ಇಂದು ವರ್ತಕರು ಸಚಿವದ್ವಯರಿಗೆ ಮನವಿ ಸಲ್ಲಿಸಿದರು. ಹೋಟೆಲ್ ಗಳಿಗೆ ಅವಕಾಶ ಕೊಟ್ಟಿದ್ದೀರಾ. ಆದ್ರೆ ಸರ್ಕಾರಕ್ಕೆ ಅತಿಹೆಚ್ಚು ರೆವಿವ್ಯೂ ಕೊಡುವಂತ ಚಿನ್ನದ, ಬಟ್ಟೆ ಅಂಗಡಿಗಳಿಗೆ ಅವಕಾಶ ನೀಡಿಲ್ಲ. ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿದ್ರೆ ಹೇಗೆ ಎಂದು ಸಚಿವರಿಗೆ ಮೈಸೂರಿನ ವರ್ತಕರು ಪ್ರಶ್ನಿಸಿದರು
ಮೋದಿ ಲಾಕ್ ಡೌನ್ ಬೇಡ ಅಂತಾರೆ, ಯಡಿಯೂರಪ್ಪ ಲಾಕ್ ಡೌನ್ ವಿರೋಧ ಮಾಡ್ತಾರೆ. ನೀವು ಹೇಳಿದ ಎಲ್ಲಾ ನಿಯಮಗಳನ್ನ ಪಾಲನೆ ಮಾಡುತ್ತೇವೆ. ನಮಗೆ ವ್ಯಾಪಾರ ಮಾಡಲು ಅವಕಾಶ ಕೊಡಿ. ಲಾಕ್ ಡೌನ್ ಬೇಡ ಅಂತ ಪ್ರಧಾನಿಗಳೆ ಹೇಳಿದ್ದಾರೆ. ನಾವೂ ಈಗಾಗಲೆ ಸಾಕಷ್ಟು ನಷ್ಟದಲ್ಲಿ ಇದ್ದೇವೆ. ಬಾಡಿಗೆ ಕಟ್ಟಲೂ ಆಗುತ್ತಿಲ್ಲ ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಡಾ.ಕೆ.ಸುಧಾಕರ್ ಬಳಿ ವರ್ತಕರು ತಮ್ಮ ನೋವು ತೋಡಿಕೊಂಡರು.
ಹಾಗೆಯೇ ಬಟ್ಟೆ ಅಂಗಡಿ, ಚಿನ್ನದ ಅಂಗಡಿಗಳ, ಟೀ ಅಂಗಡಿಗಳನ್ನು ಮಾತ್ರ ಕ್ಲೋಸ್ ಮಾಡುತ್ತಿರೊದು ಸರಿಯಲ್ಲ. ಸರ್ಕಾರ ನಮಗೂ ಕಾಲ ನಿಗದಿ ಮಾಡಿ ಅವಕಾಶ ನೀಡಿ. ನೀವು ನೀಡಿದ ಕಾಲಾವಧಿಯಲ್ಲಿ ನಾವು ಕೋವಿಡ್ ನಿಯಮ ಪಾಲನೆ ಮಾಡುತ್ತೇವೆ. ಕನಿಷ್ಠ ಅರ್ಧ ದಿನ ಆದ್ರೂ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ವರ್ತಕರು ಮನವಿ ಮಾಡಿದರು.
Key words: mysore- Give -at least -half day –trade- Traders-Appeal – Minister