ರಾಜ್ಯಸರ್ಕಾರದಿಂದ ಪರಿಷ್ಕೃತ ಹೊಸ ಮಾರ್ಗಸೂಚಿ ರಿಲೀಸ್: ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಬಂದ್…

ಬೆಂಗಳೂರು,ಏಪ್ರಿಲ್,22,2021(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿರುವ ಹಿನ್ನೆಲೆ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿ ಮಾಡಿರುವ ಸರ್ಕಾರ ಇದೀಗ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.jk

ಈಗಾಗಲೇ ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಣಕ್ಕಾಗಿ ರಾತ್ರಿ ಕರ್ಪ್ಯೂ ಹಾಗೂ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ಆದೇಶಿಸಿದೆ. ಇದೀಗ ದಿಢೀರ್ ಮಾರ್ಗಸೂಚಿ ಬದಲಿಸಿದ್ದು ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಅಗತ್ಯ ಸೇವೆ  ಹೊರತುಪಡಿಸಿ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಮಾಡಿ ಆದೇಶಿಸಲಾಗಿದೆ.

ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು  ಹೊರಡಿಸಿದ್ದಾರೆ. ಹೊಸ ಮಾರ್ಗಸೂಚಿಯಂತೆ ಮೇ 4ರವರೆಗೆ  ರಾಜ್ಯಾದ್ಯಂತ ಅಗತ್ಯ ಸೇವೆಗಳು ಹೊರತುಪಡಿಸಿ ಎಲ್ಲಾ ಶಾಪ್ ಗಳು  ಬಂದ್ ಆಗಲಿದೆ.

ನಿನ್ನೆಯಿಂದಲೇ ಅನ್ವಯವಾಗುವಂತೆ ಪರಿಷ್ಕೃತ ಮಾರ್ಗಸೂಚಿ  ಬಿಡುಗಡೆ ಮಾಡಲಾಗಿದ್ದು, ಆದೇಶದಲ್ಲಿ ಅಗತ್ಯಸೇವೆ ಹೊರತಾಗಿ ಉಳಿದ ಎಲ್ಲಾ ಶಾಪ್ ಬಂದ್ ಗೆ ಸೂಚಿಸಲಾಗಿದೆ. ಹೀಗಾಗಿ ಪೊಲೀಸರು ಬೆಂಗಳೂರು ಸೇರಿ ರಾಜ್ಯಾದ್ಯಂತ ಫೀಲ್ಡ್ ಗಿಳಿದು ಅಂಗಡಿ ಮುಂಗಟ್ಟು ಮುಚ್ಚಿಸುತ್ತಿದ್ದಾರೆ.  ಅಗತ್ಯ ಸೇವೆ ಒದಗಿಸುವಂತೆ ಮೆಡಿಕಲ್, ಹಾಲು, ಇ-ಕಾಮರ್ಸ್ ಸೇರಿದಂತೆ ಇತರೆ ಶಾಪ್ ಹೊರತಾಗಿ, ಇತರೆ ಅಂಗಡಿ ಮುಂಗಟ್ಟುಗಳನ್ನು ಕ್ಲೋಸ್ ಮಾಡುತ್ತಿದ್ದಾರೆ.

ಪರಿಷ್ಕೃತ ಮಾರ್ಗಸೂಚಿಯಲ್ಲಿ ಮದುವೆಗೆ 50 ಜನರಿಗೆ, ಅಂತ್ಯಕ್ರಿಯೆಗೆ 20 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಎಲ್ಲಾ ಇ ಕಾಮರ್ಸ್ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್, ಸ್ವಿಮ್ಮಿಂಗ್ ಫೂಲ್, ಮಾರ್ಕೆಟ್ ಬಂದ್ ಮಾಡಲಾಗುತ್ತಿದೆ. ಶಾಲಾ-ಕಾಲೇಜು ಬಂದ್ ಮಾಡಲಾಗಿದ್ದು, ಟಿವಿ ಶೋರೂಂ ಚಪ್ಪಲಿ ಅಂಗಡಿ ಫ್ಯಾನ್ಸಿ ಸ್ಟೋರ್, ಅಪ್ಟಿಕಲ್ ಎಲೆಕ್ಟ್ರಾನಿಕ್ ಅಂಗಡಿಗಳು ಬಂದ್ ಮಾಡುವಂತೆ ಸೂಚಿಸಲಾಗಿದೆ. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಕ್ರೀಡಾ ಚಟುವಟಿಕೆಗಳನ್ನ ಬಂದ್ ಮಾಡುವಂತೆ ತಿಳಿಸಲಾಗಿದೆ.

ಕಟ್ಟಡ ಕಾಮಗಾರಿಗೆ ಯಾವುದೇ ತೊಂದರೆ ಇಲ್ಲ. ರಾತ್ರಿ ಪಾಳಿಯಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ  ಅವಕಾಶ ನೀಡಲಾಗಿದೆ. ಹಾಲು ಮಾಂಸ, ಮೀನು ಮಾರಾಟ ಇರುತ್ತದೆ.  ಕೈಗಾರಿಕೆಗಳಿಗೆ ಕೆಲಸಕ್ಕೆ ಹೋಗುವವರು ಐಡಿಕಾರ್ಡ್ ತೋರಿಸಬೇಕು. ರಾತ್ರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಸ್ ನಲ್ಲಿ ತೆರಳೋರು ಟಿಕೆಟ್ ತೋರಿಸಿ ಸಾಗಬೇಕು. ಅಂತರಾಜ್ಯ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. ರಾಜ್ಯಾಧ್ಯಂತ  ಮಂದಿರ ಮಸೀದಿ ಚರ್ಚ್ ಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧವಿರುತ್ತದೆ. ಸಲೂನ್, ಬ್ಯೂಟಿ ಪಾರ್ಲರ್ ಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಜನರಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

release-revised-new-guidelines-state-government-all-bandh

ಇದಲ್ಲದೇ ಅಗತ್ಯ ಸೇವೆ ಒದಗಿಸುವಂತ ಸೇವೆಯ ಶಾಪ್ ಗಳು ಹೊರತಾಗಿ, ರಾಜ್ಯಾಧ್ಯಂತ ಇತರೆ ಶಾಪ್ ಗಳನ್ನು ಬಂದ್ ಮಾಡುವಂತೆ ಇದೀಗ ನೂತನ ಮಾರ್ಗಸೂಚಿ ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಹಿನ್ನೆಲೆ ಪೊಲೀಸರು  ಅಂಗಡಿ, ಮಾರ್ಕೆಟ್ ವ್ಯಾಪಾರವನ್ನ ಬಂದ್ ಮಾಡಿಸುತ್ತಿದ್ದಾರೆ.

Key words: Release -Revised -New Guidelines – State Government-All bandh