ದೇಶದಲ್ಲಿ ಸತತ 5ನೇ ದಿನವೂ  3 ಲಕ್ಷದ ಗಡಿ ದಾಟಿದ ಕೋವಿಡ್ ಕೇಸ್…

ನವದೆಹಲಿ,ಏಪ್ರಿಲ್,26,2021(www.justkannada.in): ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು ಸತತ 5ನೇ ದಿನವೂ ಕೋವಿಡ್ ಕೇಸ್ 3 ಲಕ್ಷದ ಗಡಿ ದಾಟಿದೆ.jk

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,52,991 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,73,13,163ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕೊರೋನಾ ಸೋಂಕಿಗೆ 2812  ಮಂದಿ ಬಲಿಯಾಗಿದ್ದಾರೆ.ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,95,123ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 28,13,658 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ನಿಂದ ಗುಣಮುಖರಾದವರ ಸಂಖ್ಯೆ 1,43,04,382 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 2,19,272 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.india- Covid case- crossing- 3 lakhs - fifth day

ನಿನ್ನೆ 14,02,367 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ದೇಶದಲ್ಲಿ ಈವರೆಗೆ 14,19,11,223 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

ENGLISH SUMMARY….

COVID cases in India cross 3 lakh mark continuously for the 5th day
New Delhi, Apr. 26, 2021 (www.justkannada.in): The total number of new COVID cases in the country is increasing alarmingly day by day. The number of COVID cases crossed the 3 lakh mark continuously for the 5th day.
According to the information provided by the Health and Family Welfare Department, Govt. of India 3,52,991 fresh cases were reported in the country in the last 24 hours increasing the total tally to 1,73,13,163. At the same time, 2812 people lost their lives increasing the total tally to 1,95,123.india- Covid case- crossing- 3 lakhs - fifth day
There are 28,13,658 active COVID cases and the number of patients who have recovered from COVID has increased to 1,43,04,382. About 2,19,272 patients were discharged in the last 24 hours.
COVID sample tests were conducted on 14,02,367 people and vaccines have been provided to 14,19,11,223 people.
Keywords: COVID-19 Pandemic/ Status/ 3 lakh in a single day/ last 24 hours

Key words: india- Covid case- crossing- 3 lakhs – fifth day