ಬೆಂಗಳೂರು,ಏಪ್ರಿಲ್,29,2021(www.justkannada.in): ಕೊರೋನಾ , ಲಾಕ್ ಡೌನ್ ಹಿನ್ನೆಲೆ ಬೆಂಗಳೂರಿನಿಂದ ಹಳ್ಳಿಗಳಿಗೆ ಹೋದವರ ಮೇಲೆ ನಿಗಾ ಇಡಿ ಎಂದು ಜಿಲ್ಲಾಡಳಿತಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದರು.
ಕೊರೋನಾ ನಿಯಂತ್ರಣ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಡಳಿತಗಳ ಜತೆ ಸಭೆ ನಡೆಸಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಬೆಂಗಳೂರಿನಿಂದ ಹಳ್ಳಿಗಳಿಗೆ ಹೋದವರ ಮೇಲೆ ನಿಗಾ ಇಡಿ. ಪಾಸಿಟಿವ್ ಪ್ರಕರಣ ಕಡಿಮೆ ಮಾಡಲು ಕ್ರಮ ಕೈಗೊಳ್ಳಿ. ಮೆಡಿಕಲ್ ಕಿಟ್ ಗಳನ್ನ ಡಿಸಿ ಹಂತದಲ್ಲೇ ವಿತರಿಸಿ. ಹೋಂ ಐಸೋಲೇಷನ್ ನಲ್ಲಿರುವವರ ಮೇಲೂ ನಿಗಾ ಇಡಿ. ಇದಕ್ಕೆ ಮೇಲ್ವೀಚಾರಕರನ್ನ ನೇಮಕ ಮಾಡಿ ಎಂದು ನಿರ್ದೇಶನ ನೀಡಿದರು.
ಹಾಗೆಯೇ ಗ್ರಾಮಪಂಚಾಯಿತಿಗಳಲ್ಲಿ ಟಾಸ್ಕ್ ಫೋರ್ಸ್ ಗಳನ್ನ ರಚಿಸಿ. ಪಡಿಓಗಳನ್ನು ನಿಯೋಜನೆ ಮಾಡಿ. ಕೊರೋನಾ ಲಕ್ಷಣ ಇರುವವರಿಗೆ ಮಾತ್ರ ಟೆಸ್ಟ್ ಮಾಡಿ. ಮೆಡಿಕಲ್ ಆಕ್ಸಿಜನ್ ಸರಿಯಾಗಿ ಒದಗಿಸಿ. ಅಗತ್ಯವಿದ್ದರೇ ಮಾತ್ರ ರೆಮ್ ಡಿಸಿವಿರ್ ನೀಡಿ ಎಂದು ಜಿಲ್ಲಾಡಳಿತಕ್ಕೆ ಸಿಎಂ ಬಿಎಸ್ ವೈ ಸೂಚನೆ ನೀಡಿದರು.
Key words: covid control-CM BS Yeddyurappa- Direction -District administration