ಮೈಸೂರು,ಏಪ್ರಿಲ್,30,2021(www.justkannada.in): ನೆನ್ನೆ ಸುದ್ದಿಗೋಷ್ಠಿಯ ವೇಳೆ ಬಿಜೆಪಿಯವರು ನಾಯಿಗಳೆಂದು ಜರಿದಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗೆ ರಾಜ್ಯ ಬಿಜೆಪಿ ವಕ್ತಾರ ಎಂ.ಜೆ ಮಹೇಶ್ ತಿರುಗೇಟು ನೀಡಿದ್ದಾರೆ.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಎಂ.ಜೆ ಮಹೇಶ್, ಹೌದು ನಾವು ನಾಯಿಗಳು, ನಾಯಿಯ ರೀತಿ ನಿಯತ್ತಿನಿಂದ ಕೆಲಸ ಮಾಡುತ್ತಿದೆ. ದೇಶದ ಜನತೆಯ ಪರವಾಗಿ ಅಹರ್ನಿಶಿಯಾಗಿ ನಾಯಿಯ ರೀತಿಯಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ. ಮೊದಲು ಅಸಂಸದೀಯ ಪದ ಬಳಕೆ ಮಾಡುವ ಮೇಲೆ ಎಚ್ಚರವಿರಲಿ ಎಂದು ಪರೋಕ್ಷವಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಗೆ ಎಚ್ಚರಿಕೆ ನೀಡಿದರು.
ಭಾರತದ ಲಸಿಕೆಯನ್ನ ಜಗತ್ತೇ ಒಪ್ಪಿಕೊಂಡ್ರೂ ಕಾಂಗ್ರೆಸ್ ಗೆ ಸಂಶಯ…
ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ. ಅದು ಸಿಎಎ, ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಸಂದರ್ಭದಲ್ಲಿಯೂ ರೈತರು ಹಾಗೂ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡಿತ್ತು. ದೇಶದ ಜನರಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ. ಜಗತ್ತೆ ಭಾರತದ ಲಸಿಕೆಯನ್ನು ಒಪ್ಪಿಕೊಂಡರೆ, ಕಾಂಗ್ರೆಸ್ ಲಸಿಕೆಯ ಕುರಿತೇ ಸಂದೇಹ ವ್ಯಕ್ತಪಡಿಸುತ್ತಿದೆ ಎಂದು ಟೀಕಿಸಿದರು.
ಕೊರೊನಾ ವಾರಿಯರ್ಸ್ ಅವರ ಇನ್ಸುರೆನ್ಸ್ ರದ್ದು ಮಾಡಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡುತ್ತಾರೆ. ಬೇಕೆಂತಲೇ ರಾಜ್ಯದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಕಾಂಗ್ರೆಸ್ ನ ಹತಾಶ ಹೇಳಿಕೆಗಳಿಂದಲೇ ಕೊರೊನಾ ರೋಗಿಗಳಲ್ಲಿ ಭಯವನ್ನುಂಟು ಮಾಡಿರುವುದು. ಗುಜರಾತ್, ಕಾಶ್ಮೀರ, ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಜನತೆಯ ನೆರವಿಗೆ ಧಾವಿಸಿದ್ದು ಮೊದಲು ಬಿಜೆಪಿ. ಸೇವೆಯೇ ಪರಮೋಧರ್ಮ ಎನ್ನುವ ಧ್ಯೇಯವನ್ನಿಟ್ಟುಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಒಂದು ಬೇಜವಾಬ್ದಾರಿ ಪಕ್ಷ ಎಂದು ಹರಿಹಾಯ್ದರು.
ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್ ಗೆ ಗಾದೆ ಉಲ್ಲೇಖಿಸಿ ಟಾಂಗ್….
ಸ್ವಪಕ್ಷದ ವಿರುದ್ಧವೇ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಮಹೇಶ್, ಕೆಲವರಿಗೆ ಆತ್ಮತೃಪ್ತಿ ಇಲ್ಲದವರಿಗೆ ಮದ್ದಿಲ್ಲ. ವಿಶ್ವನಾಥ್ ರಿಂದ ಮತ್ತಷ್ಟು ಪ್ರಬುದ್ಧತೆ ಹಾಗೂ ಪಕ್ವತೆಯನ್ನು ಅಪೇಕ್ಷೆ ಮಾಡುತ್ತಿದ್ದೇವೆ. ಸುದೀರ್ಘ ಅವಧಿಯ ರಾಜಕೀಯ ಜೀವನ ನಡೆಸಿದ ವಿಶ್ವನಾಥ್ ರವರು ಗಾದೆ ರೀತಿ ವರ್ತಿಸದೆ ಮತ್ತಷ್ಟು ಪಕ್ವತೆ, ಮತ್ತಷ್ಟು ಪ್ರಬುದ್ಧತೆಯಿಂದ ಬಿಜೆಪಿ ಆಪೇಕ್ಷೆಗೆ ತಕ್ಕಂತೆ ಅವರ ಹೇಳಿಕೆಗಳು ಹಾಗೂ ನಡಾವಳಿಗಳು ಇರಬೇಕು ಎಂದು ಗಾದೆ ಉಲ್ಲೇಖಿಸಿ ಹೆಚ್. ವಿಶ್ವನಾಥ್ ರಿಗೆ ಟಾಂಗ್ ನೀಡಿದರು.
Key words: mysore- compared – BJP- dogs- BJP spokesperson- MJ Mahesh-congress-spokesperson-M.Laxman