ಬೆಂಗಳೂರು, ಮೇ 01, 2021 (www.justkannada.in): ಈ ಬಾರಿ ಒಲಿಂಪಿಕ್ಸ್ಅನ್ನುಪ್ರೇಕ್ಷಕರಿಲ್ಲದೇ ನಡೆಸಬಹುದು ಎಂಬ ಸುಳಿವು ಹೊರಬಿದ್ದಿದೆ.
ಈ ವರ್ಷದ ಜುಲೈನಲ್ಲಿ ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಒಲಿಂಪಿಕ್ಸ್ ನಡೆಯಲಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಒಲಂಪಿಕ್ಸ್ ಮೇಲೆಯೂ ಕರಿನೆರಳು ಆವರಿಸಿದೆ.
ಒಲಿಂಪಿಕ್ಸ್ ಅನ್ನು ಅಭಿಮಾನಿಗಳಿಲ್ಲದೆ ನಡೆಸಬಹುದು ಎಂದು ಒಲಿಂಪಿಕ್ ಕ್ರೀಡಾಕೂಟದ ಮುಖ್ಯಸ್ಥ ಸೈಕೊ ಹಶಿಮೊಟೊ ಹೇಳಿದ್ದಾರೆ. ಆದರೆ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ವಿದೇಶಿ ಅಭಿಮಾನಿಗಳಿಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಮಾರ್ಚ್‌ನಲ್ಲಿ ನಿರ್ಧರಿಸಲಾಗಿತ್ತು. ವಿದೇಶಿ ಅಭಿಮಾನಿಗಳಿಲ್ಲದೆ ಒಲಿಂಪಿಕ್ ಕ್ರೀಡಾಕೂಟ ನಡೆಯುತ್ತಿರುವುದು ಇದೇ ಮೊದಲು.